Home ಟಾಪ್ ಸುದ್ದಿಗಳು ಫೇಕ್ ಕಾರ್ಡ್: ತನಿಖೆಗೆ ಸೂಚಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್

ಫೇಕ್ ಕಾರ್ಡ್: ತನಿಖೆಗೆ ಸೂಚಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್

ಉಡುಪಿ: ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕುರಿತಂತೆ ಲಕ್ಷಾಂತರ ಫೇಕ್ ಕಾರ್ಡ್ ಗಳಿರೋದು ಗಮನಕ್ಕೆ ಬಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಅವರು, ವೇತನ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನ ನಾವು ಕಡಿತ ಮಾಡಿಲ್ಲ. 2021 ರಲ್ಲಿ 2,000 ಇದ್ದ ವಿದ್ಯಾರ್ಥಿ ವೇತನ ಎಂಟು ಸಾವಿರಕ್ಕೆ ಏರಿಸಿದರು. 10,000 ನೀಡುವವರಿಗೆ 30,000 ಕೊಟ್ಟರು. ಮೂವತ್ತು ಸಾವಿರ ಕೊಡುವವರಿಗೆ ಒಂದು ಲಕ್ಷ ರೂ. ಕೊಟ್ಟರು. ಇದು ಅವೈಜ್ಞಾನಿಕ ಕ್ರಮವಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಏಕಾಏಕಿ 39 ಲಕ್ಷ ಕಾರ್ಡ್ ಬೇಡಿಕೆ ಬಂತು.


ಹಾವೇರಿ ಜಿಲ್ಲೆಯಲ್ಲಿ ಮೂರು ಲಕ್ಷ ಕಾರ್ಡುಗಳಿವೆ. ಇದರಲ್ಲಿ ಅನೇಕ ನಕಲಿ ಕಾರ್ಡುಗಳಿವೆ. ಈ ಬಾರಿ 13 ಲಕ್ಷ ಅರ್ಜಿಗಳು ಬಂದಿವೆ. ನಿಜವಾದ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸಹಾಯ ಸಿಗಬೇಕು. ಈ ಹಿನ್ನೆಲೆಯಲ್ಲಿ ನಕಲಿ ಕಾರ್ಡ್ ಗಳು ಯಾವುದು ಎಂಬುದನ್ನು ಪತ್ತೆ ಹಚ್ಚುತ್ತೇವೆ. ಅಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ ಎಂದರು.

Join Whatsapp
Exit mobile version