Home ಟಾಪ್ ಸುದ್ದಿಗಳು ರಿಸರ್ವ್ ಬ್ಯಾಂಕ್ ಮ್ಯಾನೇಜರ್ ಖಾತೆಗೇ ಕನ್ನ| ಲಕ್ಷಾಂತರ ರೂ. ಎಗರಿಸಿದ ಖದೀಮರು!

ರಿಸರ್ವ್ ಬ್ಯಾಂಕ್ ಮ್ಯಾನೇಜರ್ ಖಾತೆಗೇ ಕನ್ನ| ಲಕ್ಷಾಂತರ ರೂ. ಎಗರಿಸಿದ ಖದೀಮರು!

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಸೈಬರ್ ಹಗರಣವೊಂದರಲ್ಲಿ ರಿಸರ್ವ್ ಬ್ಯಾಂಕ್ ಅಧಿಕಾರಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ.


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೈದರಾಬಾದ್ ಕಚೇರಿಯಲ್ಲಿ ಮ್ಯಾನೇಜರ್ ಆಗಿರುವ ಮಹಿಳೆ ತನ್ನ ಬ್ಯಾಂಕ್ ಖಾತೆಯಿಂದ
ಹಣ ಕಳೆದುಕೊಂಡು ಹೈದರಾಬಾದ್ ಸೈಬರ್ ಕ್ರೈಂ ವಿಂಗ್ ಅನ್ನು ಸಂಪರ್ಕಿಸಿ ದೂರು ನೀಡಿದ್ದು, ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಲವು ದಿನಗಳಿಂದ ರಿಸರ್ವ್ ಬ್ಯಾಂಕ್ ಅಧಿಕಾರಿಗೆ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬರುತ್ತಲೇ ಇತ್ತು. ನಂತರ ಸಿಮ್ ಕಾರ್ಡ್ ವಿವರಗಳನ್ನು ಪಡೆದ ಖದೀಮರು ಸಿಮ್ ಕಾರ್ಡ್‌ನ ಅವಧಿ ಅಕ್ಟೋಬರ್‌ನಲ್ಲಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.


ಕರೆ ಮಾಡಿದವರ ಸೂಚನೆಗಳ ಪ್ರಕಾರ ಸಿಮ್ ಕಾರ್ಡ್‌ನ ಸಿಂಧುತ್ವವನ್ನು ವಿಸ್ತರಿಸುವ ಸಲುವಾಗಿ ಅಧಿಕಾರಿಯು ಬ್ಯಾಂಕ್ ಖಾತೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಫೋನ್ ಕರೆ ಮುಕ್ತಾಯವಾದ ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ನಿಂದ ಲಕ್ಷಾಂತರ ರೂಪಾಯಿಗಳನ್ನು ಹಿಂಪಡೆಯಲಾಗಿದೆ ಎಂದು ಎಂಬ ಎಸ್ಎಂಎಸ್ ಸಂದೇಶ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Join Whatsapp
Exit mobile version