Home ಕರಾವಳಿ ಉಪ್ಪಿನಂಗಡಿ: ಕಣ್ಣಿಗೆ ಬಟ್ಟೆಕಟ್ಟಿ ನದಿಗೆ ಹಾರಿದ ವ್ಯಕ್ತಿ ಸಾವು

ಉಪ್ಪಿನಂಗಡಿ: ಕಣ್ಣಿಗೆ ಬಟ್ಟೆಕಟ್ಟಿ ನದಿಗೆ ಹಾರಿದ ವ್ಯಕ್ತಿ ಸಾವು

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಗೆ ಮುಂಜಾನೆ ಸೇತುವೆಯಿಂದ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ವ್ಯಕ್ತಿಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.


ಇಂದು ಮುಂಜಾನೆ ಬೆಳ್ತಂಗಡಿಯಿಂದ ಉಪ್ಪಿನಂಗಡಿಗೆ ಬಸ್ ನಲ್ಲಿ ಬಂದು ಇಳಿದ ವ್ಯಕ್ತಿಯೋರ್ವ ನೇತ್ರಾವತಿ ನದಿಯ ಸೇತುವೆಯ ಮೇಲಿಂದ ಕಣ್ಣಿಗೆ ಬಟ್ಟೆ ಕಟ್ಟಿ ನದಿಗೆ ಹಾರಿರುವುದು ಬೆಳಕಿಗೆ ಬಂದಿದೆ.


ನದಿಯಲ್ಲಿ ಹೆಚ್ಚಿನ ನೀರು ಇದ್ದುದರಿಂದ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ತಕ್ಷಣ ಸ್ಥಳೀಯ ನಿವಾಸಿಗಳಾದ ಸಯಾದ್, ಹಂಝಾ, ರಶೀದ್ ಎಂಬವರು ನದಿಗೆ ಹಾರಿ ವ್ಯಕ್ತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸ್ಥಳೀಯ ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Join Whatsapp
Exit mobile version