ಹಾಸನ: ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದು ದುರದೃಷ್ಟವಶಾತ್ ಎದುರಿಗೆ ಸಿಕ್ಕ ಕಬ್ಬಿಣದ ಗೇಟ್ ಹಾರಲು ಹೋಗಿ ಕಬ್ಬಿಣದ ಸಲಾಕೆಗೆ ಸಿಲುಕಿ ಗಾಯಗೊಂಡಿರುವ ಘಟನೆ ಆಲೂರು ತಾಲೂಕು ಬೆಳಮೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಗದೀಶ್ ಎಂಬವರ ಮನೆಯ ಮುಂದಿನ ಗೇಟ್ ಜಿಗಿಯುವಾಗ ಆಕಸ್ಮಿಕವಾಗಿ ಸರಳಿನ ಚೂಪಾದ ಭಾಗ ಜಿಂಕೆಯ ಕಾಲಿಗೆ ಚುಚ್ಚಿಕೊಂಡಿದೆ.
ಇದರಿಂದ ಮುಂದೆ ಹೋಗಲಾಗದೆ ನೇತುಹಾಕಿದ ಸ್ಥಿತಿಯಲ್ಲೇ ನರಳಾಡುತ್ತಿತ್ತು. ಬೆಳಗ್ಗೆ ಜಿಂಕೆ ಗೇಟ್ ನಲ್ಲಿ ನೇತಾಡುತ್ತಿದ್ದುದನ್ನು ಗಮನಿಸಿದ ಜಗದೀಶ್ ಮತ್ತು ಇತರರು, ಉಪಾಯದಿಂದ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಗಾಯದಿಂದ ಆಘಾತಗೊಂಡಿದ್ದ ಜಿಂಕೆಯನ್ನು ಆರೈಕೆ ಮಾಡಿ ನಂತರ ಜಿಂಕೆ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.