ಲಾಸ್ ಏಂಜಲೀಸ್: ಸ್ಟೀರಿಂಗ್ ವೀಲ್, ಪೆಡಲ್ ಹೊಂದಿರದ ಸ್ವಯಂ-ಚಾಲನೆ ಮಾಡುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧಾರಿತ ಎಲೆಕ್ಟ್ರಿಕ್ ರೋಬೋಟ್ಯಾಕ್ಸಿಯನ್ನು ಟೆಸ್ಲಾ ಕಂಪನಿ ಬಿಡುಗಡೆ ಮಾಡಿದೆ.
ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಇಒ ಎಲಾನ್ ಮಸ್ಕ್, ಈ ಕಾರಿನ ಬೆಲೆ 30 ಸಾವಿರ ಡಾಲರ್(ಅಂದಾಜು 25 ಲಕ್ಷ ರೂ.) ಅಥವಾ ಅದಕ್ಕಿಂತಲೂ ಕಡಿಮೆ ಇರಲಿದೆ. ವೈರ್ ಲೆಸ್ ಚಾರ್ಜ್ ಮಾಡಬಹುದಾದ ಈ ಕಾರು ಮಾನವ ಚಾಲಿತ ಕಾರುಗಳಿಗಿಂತ 10 ರಿಂದ 20 ಪಟ್ಟು ಸುರಕ್ಷಿತವಾಗಿರಲಿದೆ ಎಂದು ತಿಳಿಸಿದರು.
ಎರಡು ಆಸನ, ಚಿಟ್ಟೆಯಂತೆ ತೆರೆಯಬಹುದಾದ ಬಾಗಿಲು ಹೊಂದಿರುವ ಈ ಕಾರಿನ ಉತ್ಪಾದನೆ 2026ರಲ್ಲಿ ಆರಂಭವಾಗಲಿದೆ. ಮಾರಾಟ ಜಾಸ್ತಿಯಾದಂತೆ ಬೆಲೆಯೂ ಕಡಿಮೆಯಾಗಲಿದೆ. 2027ರಲ್ಲಿ ಈ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಿದರು.