Home ಟಾಪ್ ಸುದ್ದಿಗಳು ಗಾಝಾದಲ್ಲಿ ಮೂವರು ಇಸ್ರೇಲ್ ಸೈನಿಕರ ಬರ್ಬರ ಹತ್ಯೆ

ಗಾಝಾದಲ್ಲಿ ಮೂವರು ಇಸ್ರೇಲ್ ಸೈನಿಕರ ಬರ್ಬರ ಹತ್ಯೆ

ಗಾಝಾ: ಉತ್ತರ ಗಾಝಾದ ಸ್ಟ್ರಿಪ್ನಲ್ಲಿ ಕದನದ ಸಂದರ್ಭದಲ್ಲಿ ಮೂವರು ಇಸ್ರೇಲಿ ಸೈನಿಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.


ಮೃತ ಸೈನಿಕರನ್ನು ಮಾಸ್ಟರ್ ಸಾರ್ಜೆಂಟ್. (res.) ಓರಿ ಮೋಶ್, ಬೋರೆನ್ಸ್ಟೈನ್, ನೆಟಾನೆಲ್ ಹರ್ಷ್ಕೋವಿಟ್ಜ್ ಎಂದು ಇಸ್ರೇಲ್ ಸೇನೆ ಹೇಳಿದೆ.


ಹಮಾಸ್ ಸಂಘಟನೆ ಮರು ಸಂಘಟಿತವಾಗುವುದನ್ನು ತಪ್ಪಿಸಲು ಇಸ್ರೇಲ್ ಸೇನೆ ಕಾರ್ಯಾಚರಣೆಗೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಪ್ರತಿ ದಾಳಿಗೆ ಮೂವರು ಸೈನಿಕರು ಹತರಾಗಿದ್ದಾರೆ.


ಈ ಮೂಲಕ ಹಮಾಸ್ ದಾಳಿಗೆ ತುತ್ತಾಗಿ ಮೃತಪಟ್ಟ ಸೈನಿಕರ ಸಂಖ್ಯೆ 353 ಕ್ಕೆ ಏರಿಕೆ ಕಂಡಿದೆ.

Join Whatsapp
Exit mobile version