Home ಟಾಪ್ ಸುದ್ದಿಗಳು ಸುಂಟಿಕೊಪ್ಪದಲ್ಲಿ ಟೆಂಪೊ ಪಲ್ಟಿ: ತಪ್ಪಿದ ಬಾರಿ ಅನಾಹುತ

ಸುಂಟಿಕೊಪ್ಪದಲ್ಲಿ ಟೆಂಪೊ ಪಲ್ಟಿ: ತಪ್ಪಿದ ಬಾರಿ ಅನಾಹುತ

ಸುಂಟಿಕೊಪ್ಪ: ಚಾಲಕನ ಹತೋಟಿ ತಪ್ಪಿದ ಟೆಂಪೊ ವಾಹನವೊಂದು ಸುಂಟಿಕೊಪ್ಪದ ಚಿತ್ರಾ ಸ್ಟುಡಿಯೋದ ಮಾಲೀಕ ಮತ್ತು ಸುಂಟಿಕೊಪ್ಪದ ಪತ್ರಕರ್ತ ಎಂ.ಬಿ.ವಿನ್ಸೆಂಟ್ ಅವರ ಮುನೆಯ ಮುಂಭಾಗದಲ್ಲಿ ಮಗುಚಿದ ಪರಿಣಾಮ ಬಾರಿ ಅನಾಹುತ ತಪ್ಪಿದಂತಾಗಿದೆ.


ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ವಾಹನವು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿನ್ಸೆಂಟ್ ಅವರ ಮನೆಯ ಮುಂಭಾಗ ಮತ್ತೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ.


ಒಂದು ವೇಳೆ ವಿದ್ಯುತ್ ಕಂಬ ಇಲ್ಲದಿದ್ದರೆ ಮನೆ ಸೇರಿದಂತೆ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ಅಧೃಷ್ಟವಶಾತ್ ಮನೆಯ ಮೂವರು ಮತ್ತು ವಾಹನದಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Join Whatsapp
Exit mobile version