Home ಟಾಪ್ ಸುದ್ದಿಗಳು ದಾನಿಶ್ ಸಿದ್ದಿಕಿ ಸೇರಿ ನಾಲ್ವರು ಭಾರತೀಯರಿಗೆ ಪುಲಿಟ್ಜರ್ ಪ್ರಶಸ್ತಿ

ದಾನಿಶ್ ಸಿದ್ದಿಕಿ ಸೇರಿ ನಾಲ್ವರು ಭಾರತೀಯರಿಗೆ ಪುಲಿಟ್ಜರ್ ಪ್ರಶಸ್ತಿ

ನ್ಯೂಯಾರ್ಕ್: ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದ ಭಾರತದ ರಾಯ್ಟರ್ ಛಾಯಾಗ್ರಾಹಕ ದಾನಿಶ್‌ ಸಿದ್ದಿಕಿ ಸೇರಿ ನಾಲ್ವರು ಭಾರತೀಯ ಛಾಯಾಗ್ರಾಹಕರು 2022ನೇ ಸಾಲಿನ ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅದ್ನಾನ್ ಅಬಿದಿ, ಸನಾ ಇರ್ಷಾದ್ ಮಟ್ಟೂ ಹಾಗೂ ಅಮಿತ್ ದವೆ ಅವರು ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನರಾದ ಛಾಯಾಗ್ರಾಹಕರು.

‘ಭಾರತದಲ್ಲಿ ಕೋವಿಡ್‌ಗೆ ಸಂಬಂಧಿಸಿ ಇವರು ತೆಗೆದ ಚಿತ್ರಗಳು ಅನ್ಯೋನ್ಯತೆ ಮತ್ತು ವಿನಾಶವನ್ನು ಸಮತೋಲನದಿಂದ ಬಿಂಬಿಸಿವೆ. ಜತೆಗೆ ನೋಡುಗರಿಗೆ ಉನ್ನತ ಅರ್ಥವನ್ನು ನೀಡಿವೆ. ಇದಕ್ಕಾಗಿ ಪ್ರಶಸ್ತಿ ನೀಡಲಾಗಿದೆ’ ಎಂದು ‘ಪುಲಿಟ್ಜರ್’ ವೆಬ್‌ ಸೈಟ್‌ ನಲ್ಲಿ ತಿಳಿಸಲಾಗಿದೆ.

Join Whatsapp
Exit mobile version