Home ಟಾಪ್ ಸುದ್ದಿಗಳು ಪಂಜಾಬ್ ಶಾಂತಿ ಕದಡಲು ಪ್ರಯತ್ನಿಸುವವರನ್ನು ಸುಮ್ಮನೆ ಬಿಡಲ್ಲ: ಸಿಎಂ ಭಗವಂತ್ ಮಾನ್

ಪಂಜಾಬ್ ಶಾಂತಿ ಕದಡಲು ಪ್ರಯತ್ನಿಸುವವರನ್ನು ಸುಮ್ಮನೆ ಬಿಡಲ್ಲ: ಸಿಎಂ ಭಗವಂತ್ ಮಾನ್

ಪಂಜಾಬ್ : ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸರ ಗುಪ್ತಚರ ಕೇಂದ್ರ ಕಚೇರಿಯ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ಹಾರಿಸಿದ ಕೆಲವೇ ಗಂಟೆಗಳ ನಂತರ ಪಂಜಾಬಿನ ಶಾಂತಿಯನ್ನು ಕದಡಲು ಪ್ರಯತ್ನಿಸುವವರನ್ನು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.

ಸಂಜೆ 7.45 ರ ಸುಮಾರಿಗೆ ಸಂಭವಿಸಿದ ಸ್ಫೋಟದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾನ್ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

ದಾಳಿಯಿಂದ ಯಾವುದೇ ಗಾಯವಾದ ಬಗ್ಗೆ ವರದಿಯಾಗಿಲ್ಲ. ಕಟ್ಟಡದ ಗೋಡೆಯು ಗರಿಷ್ಠ ಪರಿಣಾಮವನ್ನು ಬೀರಿದ್ದು, ಅದರೊಳಗೆ ಚೂರುಚೂರಾದ ಕಿಟಕಿ ಗಾಜುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಪಂಜಾಬಿನ ಶಾಂತಿಯೊಂದಿಗೆ “ಪ್ರಯೋಗ” ಮಾಡುತ್ತಿದೆ ಎಂದು ಬಿಜೆಪಿ ಟೀಕಿಸಿದ್ದು ಮಾಜಿ ಸಿಎಂ ಅಮರಿಂದರ್ ಸಿಂಗ್ ಇದನ್ನು “ಲಜ್ಜೆಗೆಟ್ಟ ದಾಳಿ” ಎಂದು ಕರೆದಿದ್ದಾರೆ.

ಘಟನೆಯ ಹಿನ್ನಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. “ಮೊಹಾಲಿ ಸ್ಫೋಟವು ಪಂಜಾಬ್ ನ ಶಾಂತಿಯನ್ನು ಕದಡಲು ಬಯಸುವವರ ಹೇಡಿತನದ ಕೃತ್ಯವಾಗಿದೆ. ಎಎಪಿ ಸರ್ಕಾರವು ಅಂತವರ ಆಸೆಗಳನ್ನು ಈಡೇರಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಪಂಜಾಬ್ ನ ಎಲ್ಲಾ ಜನರ ಸಹಕಾರದೊಂದಿಗೆ ಎಲ್ಲಾ ಸಂದರ್ಭಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲಾಗುವುದು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅವರು ಹೇಳಿದರು.

Join Whatsapp
Exit mobile version