Home Uncategorized ಸೆ.30ರ ಮೆರವಣಿಗೆಯಲ್ಲಿ ಮಾಸ್ಕ್ ಧರಿಸದ ತಪ್ಪಿಗೆ ನ.7ರಂದು ರೂ. 250 ದಂಡ ಪಾವತಿಸಿದ ತೇಜಸ್ವಿ ಸೂರ್ಯ

ಸೆ.30ರ ಮೆರವಣಿಗೆಯಲ್ಲಿ ಮಾಸ್ಕ್ ಧರಿಸದ ತಪ್ಪಿಗೆ ನ.7ರಂದು ರೂ. 250 ದಂಡ ಪಾವತಿಸಿದ ತೇಜಸ್ವಿ ಸೂರ್ಯ

ಬೆಂಗಳೂರು : ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಮೆರವಣಿಗೆ ನಡೆಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ರೂ. 250 ದಂಡ ಪಾವತಿಸಿದ್ದಾರೆ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಸೆ.30ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ತನ್ನ ಬೆಂಬಲಿಗರೊಂದಿಗೆ ರಾಜಕೀಯ ಮೆರವಣಿಗೆಯೊಂದನ್ನು ನಡೆಸಿದ್ದ ತೇಜಸ್ವಿ ಸೂರ್ಯ ಕೋವಿಡ್ – 19 ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿದ್ದರು. ಪ್ರಕರಣವೊಂದರ ವಿಚಾರಣೆಯ ಸಂದರ್ಭ ರಾಜ್ಯ ಹೈಕೋರ್ಟ್, ಜನ ಸಾಮಾನ್ಯರಿಗೆ ಮಾತ್ರ ಯಾಕೆ ದಂಡ ವಿಧಿಸುತ್ತೀರಿ? ತೇಜಸ್ವಿ ಸೂರ್ಯರಂತಹ ಪ್ರಭಾವಿ ರಾಜಕಾರಣಿಗಳಿಗೆ ದಂಡ ವಿಧಿಸಿದ್ದೀರಾ? ಈ ವಿಷಯದಲ್ಲಿ ರಾಜ್ಯಕ್ಕೆ ಯಾವ ಸಂದೇಶ ನೀಡುತ್ತಿದ್ದೀರಿ? ಎಂದು ನ.6ರಂದು ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಈ ಕುರಿತು ನ್ಯಾಯಾಲಯಕ್ಕೆ ಇಂದು ಮಾಹಿತಿ ನೀಡಿರುವ ರಾಜ್ಯ ಸರಕಾರ, ಸಂಸದ ತೇಜಸ್ವಿ ಅವರಿಂದ ಮಾಸ್ಕ್ ಧರಿಸದೆ ಮೆರವಣಿಗೆ ನಡೆಸಿದುದಕ್ಕಾಗಿ ನ.7ರಂದು 250 ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

Join Whatsapp
Exit mobile version