Home Uncategorized ಶಿರವಸ್ತ್ರ ಧರಿಸಿದ ಶಿಕ್ಷಕಿಯರಿಗೂ ಪ್ರವೇಶ ನಿರಾಕರಣೆ: ಗೇಟ್‌ ಬಳಿಯೇ ಹಿಜಾಬ್, ಬುರ್ಕಾ ತೆಗೆದ ಶಿಕ್ಷಕಿಯರು

ಶಿರವಸ್ತ್ರ ಧರಿಸಿದ ಶಿಕ್ಷಕಿಯರಿಗೂ ಪ್ರವೇಶ ನಿರಾಕರಣೆ: ಗೇಟ್‌ ಬಳಿಯೇ ಹಿಜಾಬ್, ಬುರ್ಕಾ ತೆಗೆದ ಶಿಕ್ಷಕಿಯರು

ಮಂಡ್ಯ: ಶಿರವಸ್ತ್ರ- ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದ್ದ ಪ್ರೌಢಶಾಲೆಗಳು ಇಂದಿನಿಂದ ಪುನರಾರಂಭಗೊಂಡಿವೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದು ಇದರ ನಡುವೆ ಶಿರವಸ್ತ್ರ ಧರಿಸಿದ ಶಿಕ್ಷಕಿಯರಿಗೂ ಪ್ರವೇಶ ನಿರಾಕರಿಸಲಾಗಿದೆ.

ಮಂಡ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ ಶಿರವಸ್ತ್ರ ಧರಿಸಿ ಬರುವ ಶಿಕ್ಷಕಿಯರಿಗೂ ಪ್ರವೇಶ ನಿರಾಕರಿಸಲಾಗಿದ್ದು, ಶಾಲೆಯ ಗೇಟ್ ಬಳಿಯೇ ಹಿಜಾಬ್, ಬುರ್ಕಾ ತೆಗೆದಿಟ್ಟು ಒಳಹೋಗುತ್ತಿರುವ ದೃಶ್ಯ ಕಂಡು ಬಂದಿದೆ.

ಶಿರವಸ್ತ್ರ  ಧರಿಸಿ ಬರುವ ಶಿಕ್ಷಕಿಯರಿಗೂ ಕ್ಯಾಂಪಸ್ ಒಳಗೆ ಪ್ರವೇಶ ನೀಡದಂತೆ ಮಂಡ್ಯ ಜಿಲ್ಲಾಡಳಿತ ಸೂಚನೆ ನೀಡಿದೆ. ಶಿಕ್ಷಕರು ಶಾಲೆ ಅಥವಾ ಕಾಲೇಜಿಗೆ ಪ್ರವೇಶಿಸುವ ಮೊದಲು ಗೇಟ್‌ನಲ್ಲಿಯೇ ಶಿರವಸ್ತ್ರವನ್ನು ತೆಗೆದುಹಾಕಬೇಕು ಎಂದು ಆದೇಶಿಸಲಾಗಿದೆ ಎಂದು ಹಿರಿಯ ಪತ್ರಕರ್ತ ಇಮ್ರಾನ್ ಖಾನ್ ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version