Home Uncategorized ಕೊಡಗು: ಶಿರವಸ್ತ್ರ ಧರಿಸಿ ಬಂದ 32 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ: ಮನೆಗೆ ವಾಪಸಾದ ವಿದ್ಯಾರ್ಥಿನಿಯರು

ಕೊಡಗು: ಶಿರವಸ್ತ್ರ ಧರಿಸಿ ಬಂದ 32 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ: ಮನೆಗೆ ವಾಪಸಾದ ವಿದ್ಯಾರ್ಥಿನಿಯರು

►ಕರ್ನಾಟಕ ಪಬ್ಲಿಕ್ ಶಾಲೆ ನೆಲ್ಯಹುದಿಕೇರಿಯಲ್ಲಿ ಘಟನೆ


ಮಡಿಕೇರಿ: ಹೈ ಕೋರ್ಟ್ ಮಧ್ಯಂತರ ಆದೇಶದ ಮೇರೆಗೆ ಶಿರವಸ್ತ್ರ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರನ್ನು ಮನೆಗೆ ವಾಪಸು ಕಳಿಸಿರುವ ಪ್ರಸಂಗ ನೆಲ್ಯಹುದಿಕೇರಿಯಲ್ಲಿ ನಡೆದಿದೆ.


ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ 45 ಮುಸ್ಲಿಮ್ ವಿದ್ಯಾರ್ಥಿನಿಯರ ಪೈಕಿ 32 ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಶಾಲೆಗೆ ಬಂದಿದ್ದರು. 13 ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು. ನ್ಯಾಯಾಲಯದ ಆದೇಶ ಇರುವುದರಿಂದ ಶಿರವಸ್ತ್ರ ಧರಿಸಲು ಅವಕಾಶ ಇರುವುದಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದರು. ಇದುವರೆಗೂ ಶಿರವಸ್ತ್ರ ಧರಿಸಿಯೇ ಶಾಲೆಗೆ ಬರುತ್ತಿದ್ದೆವು, ಈಗ ಅವಕಾಶ ಇಲ್ಲವೆಂದು 32 ವಿದ್ಯಾರ್ಥಿಗಳು ಮನೆಗೆ ವಾಪಾಸು ತೆರಳಿದರು. ಬಳಿಕ ಒಬ್ಬ ವಿದ್ಯಾರ್ಥಿನಿ ಶಿರ ವಸ್ತ್ರ ಧರಿಸದೆ ಶಾಲೆಗೆ ಹಾಜರಾಗಿದ್ದಾಳೆ.


ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Join Whatsapp
Exit mobile version