Home ಟಾಪ್ ಸುದ್ದಿಗಳು ಮುದ್ರಣಗೊಳ್ಳುವ ದೇಶದ ನೋಟುಗಳಲ್ಲಿ ಠಾಗೋರ್, ಅಬ್ದುಲ್ ಕಲಾಂ ಭಾವಚಿತ್ರ ?

ಮುದ್ರಣಗೊಳ್ಳುವ ದೇಶದ ನೋಟುಗಳಲ್ಲಿ ಠಾಗೋರ್, ಅಬ್ದುಲ್ ಕಲಾಂ ಭಾವಚಿತ್ರ ?

ನವದೆಹಲಿ: ಮುದ್ರಣಗೊಳ್ಳುವ ದೇಶದ ನೋಟುಗಳಲ್ಲಿ ರವೀಂದ್ರನಾಥ ಠಾಗೋರ್ ಮತ್ತು ಡಾ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಬಳಸಲು ಆರ್‌ಬಿಐ ಚಿಂತನೆ ನಡೆಸಿದೆ. ಮಹಾತ್ಮಾ ಗಾಂಧಿ ರೀತಿಯಲ್ಲೇ ದೇಶದ ನೋಟುಗಳಲ್ಲಿ ಇಬ್ಬರು ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳನ್ನು ಮುದ್ರಣಗೊಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕೆಲವು ಮುಖಬೆಲೆಯ ಹೊಸ ಸರಣಿಯ ನೋಟುಗಳಲ್ಲಿ ಟಾಗೋರ್ ಮತ್ತು ಕಲಾಂ ಅವರ ಚಿತ್ರಗಳನ್ನು ಬಳಸಲು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ ಎಂದು ವರದಿಯಾಗಿದೆ. ಆರ್‌ಬಿಐ ಇದೇ ಮೊದಲ ಬಾರಿಗೆ ಮಹಾತ್ಮಾ ಗಾಂಧಿ ಹೊರತುಪಡಿಸಿ ಇತರ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ನೋಟುಗಳಲ್ಲಿ ಬಳಸಲು ಪರಿಗಣಿಸುತ್ತಿದೆ.

ಸರಕಾರಿ ಮೂಲಗಳ ಪ್ರಕಾರ ನೋಟುಗಳಲ್ಲಿ ಒಂದು ಅಥವಾ ಎಲ್ಲಾ ಮೂರು ಚಿತ್ರಗಳನ್ನು ಆಯ್ಕೆ ಮಾಡುವ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರದ ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಮೂರು ವಾಟರ್‌ಮಾರ್ಕ್ ಮಾದರಿಗಳನ್ನು ವಿನ್ಯಾಸಗೊಳಿಸಲು ಅಧಿಕೃತ ಅನುಮತಿ ಇತ್ತು. ಆದರೆ ಈ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.

Join Whatsapp
Exit mobile version