ಬಾಂಗ್ಲಾದೇಶ | ಕಂಟೈನರ್ ಡಿಪೋದಲ್ಲಿ ಭಾರೀ ಬೆಂಕಿ: 16 ಸಾವು, 170 ಮಂದಿಗೆ ಗಾಯ

Prasthutha|

ಬಾಂಗ್ಲಾದೇಶ: ಕಂಟೈನರ್ ಡಿಪೋದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಠ 16 ಜನರು ಸಾವನ್ನಪ್ಪಿ, 170 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬಾಂಗ್ಲಾದ ಆಗ್ನೇಯದಲ್ಲಿ ನಡೆದಿದೆ.

- Advertisement -

ಬಂದರು ನಗರಿ ಚಿತ್ತಗಾಂಗ್ ನಿಂದ 40 ಕಿಲೋಮೀಟರ್ ದೂರದಲ್ಲಿರುವ ಸೀತಾಕುಂಡಾದಲ್ಲಿರುವ ಕಂಟೇನರ್ ಘಟಕದಲ್ಲಿ ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅನೇಕ ಸ್ಫೋಟಗಳು ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಹದಿನಾರು ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಚಿತ್ತಗಾಂಗ್ನ ಮುಖ್ಯ ವೈದ್ಯ ಎಲಿಯಾಸ್ ಚೌಧರಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಗಾಯಗೊಂಡವರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸೇರಿದ್ದು, ಮೂವರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ, 40 ಅಗ್ನಿಶಾಮಕ ಸಿಬ್ಬಂದಿ ಮತ್ತು 10 ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 170ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಸ್ಥಳೀಯ ಪೊಲೀಸ್ ಮುಖ್ಯಸ್ಥ ಅಬುಲ್ ಕಲಾಂ ಅಝಾ ತಿಳಿಸಿದ್ದಾರೆ.

- Advertisement -

ಸ್ಫೋಟದಿಂದಾಗಿ ಹತ್ತಿರದ ಮನೆಗಳ ಕಿಟಕಿಗಳ ಗಾಜುಗಳನ್ನು ಪುಡಿಪುಡಿಯಾಗಿದೆ ಎಂದು ವರದಿಯಾಗಿದೆ.

Join Whatsapp
Exit mobile version