ನವ ವಿವಾಹಿತ ಮಹಿಳಾ ಎಂಜಿನಿಯರ್ ಶಂಕಾಸ್ಪದ ಸಾವು

Prasthutha|

ಬೆಂಗಳೂರು: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತ ಮಹಿಳಾ ಎಂಜಿನಿಯರ್ ರೊಬ್ಬರ ಮೃತದೇಹ ಶಂಕಾಸ್ಪದವಾಗಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದೆ.

- Advertisement -

ಚಿಕ್ಕಮಗಳೂರು ಜಿಲ್ಲೆಯ ಬೋಳನಹಳ್ಳಿ ಅಂಜು ಆತ್ಮಹತ್ಯೆಗೆ ಶರಣಾದವರು. ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದ ಅಂಜು ಅವರು ಅಂಜನ್ ಕಣಿಯಾರ್ (28) ನನ್ನು ಪ್ರೀತಿಸಿ 4 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಂಜು ಪತಿ ಮನೆಯವರು ತಿಳಿಸಿದ್ದಾರೆ.

ಪತಿಯ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು. ತನಗೆ ಪತಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಂಜು 15 ದಿನಗಳ ಹಿಂದೆ ಹೇಳಿದ್ದಳು. ಹೀಗಾಗಿ ಇದು ಅತ್ಮಹತ್ಯೆಯಲ್ಲ ಕೊಲೆ ಎಂದು ಅಂಜು ಕುಟುಂಬಸ್ಥರು ಆರೋಪಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಮದುವೆ ಆಗಿತ್ತು. ಅವರಿಬ್ಬರು ಪ್ರೀತಿಸಿ ಮದುವೆ ಆಗಿದ್ದರು. ಮನೆಯಲ್ಲಿ ಅವರ ಅತ್ತೆ, ಪತಿ ಕಿರುಕುಳ ನೀಡುತ್ತಿದ್ದರು. ಹಿಂದೆ ನಮ್ಮ ಮಗಳು ಕೂಡ ಕಿರುಕುಳದ ಬಗ್ಗೆ ನಮಗೆ ಹೇಳಿದ್ದಳು. ಮೊನ್ನೆ ರಾತ್ರಿ ಕಾಲ್ ಮಾಡಿ ಚೆನ್ನಾಗಿ ಇದ್ದೇನೆ ಎಂದು ಹೇಳಿದ್ದಳು. ನಿನ್ನೆ ಮೊಬೈಲ್ ಕರೆ ಮಾಡಿದರೆ ಕಾಲ್ ರಿಸೀವ್ ಮಾಡಲಿಲ್ಲ.ರಾತ್ರಿ 7 ಗಂಟೆಗೆ ಕಾಲ್ ಮಾಡಿ ಅಂಜು ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳುತ್ತಾರೆ ನನ್ನ ಮಗಳು ನೇಣು ಹಾಕಿಕೊಂಡಿಲ್ಲ. ಕಿರುಕುಳ ನೀಡಿ ಸಾಯಿಸಿದ್ದಾರೆ ಎಂದು ಅಂಜು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಸ್ಥಳಕ್ಕೆ ಸುಬ್ರಹ್ಮಣ್ಯ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version