Home ಕರಾವಳಿ ಶಾರದೋತ್ಸವ ಮೆರವಣಿಗೆಯಲ್ಲಿ ಕೋಮು ಭಾವನೆಗೆ ಧಕ್ಕೆ ತಂದ ಟ್ಯಾಬ್ಲೋ, ದೇಶವಿರೋಧಿ ಫ್ಲೆಕ್ಸ್ ಪ್ರದರ್ಶನ: ಪೊಲೀಸ್ ಠಾಣೆಗೆ...

ಶಾರದೋತ್ಸವ ಮೆರವಣಿಗೆಯಲ್ಲಿ ಕೋಮು ಭಾವನೆಗೆ ಧಕ್ಕೆ ತಂದ ಟ್ಯಾಬ್ಲೋ, ದೇಶವಿರೋಧಿ ಫ್ಲೆಕ್ಸ್ ಪ್ರದರ್ಶನ: ಪೊಲೀಸ್ ಠಾಣೆಗೆ ದೂರು

ಬಜಪೆ: ಶಾರದೋತ್ಸವ ಮೆರವಣಿಗೆಯಲ್ಲಿ ಕೋಮು ಭಾವನೆಗೆ ಧಕ್ಕೆ ತರುವಂತಹ ಟ್ಯಾಬ್ಲೋ,  ದೇಶವಿರೋಧಿ ಫ್ಲೆಕ್ಸ್ ಅಳವಡಿಸಿದ ಬಜಪೆ ಶಾರದೋತ್ಸವ ಸಮಿತಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಬಜಪೆ ಎಂಜೆಎಂ ಆಡಳಿತ ಕಮಿಟಿ ಸದಸ್ಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ಬಜಪೆಯಲ್ಲಿ ನಡೆದ ಶಾರದೋತ್ಸವ ಮೆರವಣಿಗೆಯಲ್ಲಿ ಕೋಮು ಭಾವನೆಗೆ ಧಕ್ಕೆ ತರುವಂತಹ  ಟ್ಯಾಬ್ಲೋ,  ದೇಶವಿರೋಧಿ ಫ್ಲೆಕ್ಸ್ ಹಾಗೂ ಮೆರವಣಿಗೆಯನ್ನು ಕೇಂದ್ರ ಮಸೀದಿಯ ಮುಂಭಾಗದಲ್ಲಿ  ಸುಮಾರು ಎರಡು ಗಂಟೆಗಳ ಅಧಿಕ ಕಾಲ ಸ್ಥಗಿತಗೊಳಿಸಿ ಕೋಮು ಪ್ರಚೋದನೆಗೆಯ್ಯಲಾಗಿತ್ತು. ಇದಕ್ಕೆ ಬಜಪೆ ಶಾರದೋತ್ಸವ ಸಮಿತಿಯೇ ನೇರ ಹೊಣೆಯಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಜಪೆ ಪೊಲೀಸ್  ಠಾಣೆಗೆ  ಎಂ ಜೆ ಎಂ ಆಡಳಿತ ಕಮಿಟಿಯ ಪರವಾಗಿ ಮನವಿಯನ್ನು ನೀಡಲಾಯಿತು.

ನಿಯೋಗದಲ್ಲಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಹುಸೇನ್ ಸಿರಾಜ್,  ಜೊತೆ ಕಾರ್ಯದರ್ಶಿಯಾದ ಅಜ್ಮಲ್ ಅಲಿ, ಸದಸ್ಯರಾದ ಅಬೂಬಕ್ಕರ್ ಬಶೀರ್ ಸತ್ತಾರ್  ಭಟ್ರ ಕೆರೆ ಇಸ್ಮಾಯಿಲ್ ಬಜಪೆ ಹಾಜರಿದ್ದರು.

Join Whatsapp
Exit mobile version