Home ಟಾಪ್ ಸುದ್ದಿಗಳು ಟಿ20 ವಿಶ್ವಕಪ್| ಫೈನಲ್ ನಲ್ಲಿ ಇಂಡಿಯಾ – ಪಾಕಿಸ್ತಾನ ಮುಖಾಮುಖಿಯಾಗಲಿ ಎಂದು ಹೆಚ್ಚಿನವರ ಬಯಕೆ: ಶೇನ್...

ಟಿ20 ವಿಶ್ವಕಪ್| ಫೈನಲ್ ನಲ್ಲಿ ಇಂಡಿಯಾ – ಪಾಕಿಸ್ತಾನ ಮುಖಾಮುಖಿಯಾಗಲಿ ಎಂದು ಹೆಚ್ಚಿನವರ ಬಯಕೆ: ಶೇನ್ ವಾಟ್ಸನ್

ಸಿಡ್ನಿ: ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿ ಎಂದು ಹೆಚ್ಚಿನ ಜನರು ಬಯಸುತ್ತಾರೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಹೇಳಿದ್ದಾರೆ.

ಈಗಾಗಲೇ ಟಿ20 ವಿಶ್ವಕಪ್ ಪಂದ್ಯಾಟದ ಎರಡು ಸೆಮಿಫೈನಲ್ ಗಳಿಗೆ ದಿನಾಂಕ ನಿಗದಿಯಾಗಿದ್ದು, ವಿಶ್ವ ಕಪ್ ಟೂರ್ನಿ ಕೊನೆಯ ಹಂತದಲ್ಲಿದೆ. ನ್ಯೂಜಿಲೆಂಡ್, ಇಂಗ್ಲೆಂಡ್, ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯಾಟ ಇಂಡಿಯಾ ಮತ್ತು ಪಾಕಿಸ್ತಾನದ್ದಾಗಬೇಕೆಂದು ಎಲ್ಲರೂ ಬಯಸಿದ್ದಾರೆ ಎಂದು ವಾಟ್ಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫೈನಲ್‌ ಪಂದ್ಯದ ಕುರಿತು ಟಿ20 ವಿಶ್ವಕಪ್‌ ವೆಬ್‌ಸೈಟ್‌ ನೊಂದಿಗೆ ಮಾತನಾಡಿರುವ ವಾಟ್ಸನ್‌, ‘ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಸೆಣೆಸಾಡುವುದನ್ನು ಕಾಣಲು ಎಲ್ಲರೂ ಬಯಸುತ್ತಾರೆ. ದುರದೃಷ್ಟವಶಾತ್‌ ಮೆಲ್ಬರ್ನ್‌ನಲ್ಲಿ ನಡೆದ ಇಂಡಿಯಾ – ಪಾಕ್ ಪಂದ್ಯವನ್ನು ನೋಡಲು ಸಾಧ್ಯವಾಗಿರಲಿಲ್ಲ. ಪಂದ್ಯಾಟ ರೋಮಾಂಚಕಾರಿಯಾಗಿತ್ತು ಎಂದು ವರದಿಗಳು ಹೇಳಿತ್ತು ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ 2007ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಅದೇ ರೀತಿ ಈ ಸಾಲಿನ ಫೈನಲ್ ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವುದನ್ನು ನೋಡುವುದು ಹೆಚ್ಚಿನವರ ಬಯಕೆ ಎಂದು ವಾಟ್ಸನ್ ಹೇಳಿದ್ದಾರೆ.

Join Whatsapp
Exit mobile version