Home ಕ್ರೀಡೆ ಟಿ20 ವಿಶ್ವಕಪ್ | ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಅರ್ಧಶತಕ, ಬಾಂಗ್ಲಾದೇಶ ಗೆಲುವಿಗೆ 185 ರನ್...

ಟಿ20 ವಿಶ್ವಕಪ್ | ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಅರ್ಧಶತಕ, ಬಾಂಗ್ಲಾದೇಶ ಗೆಲುವಿಗೆ 185 ರನ್ ಗುರಿ

ಸಿಡ್ನಿ: ಆರಂಭಿಕ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಗಳಿಸಿದ ಅರ್ಧಶತಕಗಳ ನೆರವಿನ ಬಲದಲ್ಲಿ ಭಾರತ, ಬಾಂಗ್ಲಾದೇಶ ವಿರುದ್ಧದ ಮಹತ್ವದ ಪಂದ್ಯದಲ್ಲಿ 6 ವಿಕೆಟ್ ನಷ್ಟದಲ್ಲಿ 184 ರನ್’ಗಳಿಸಿದೆ.

ಸೆಮಿಫೈನಲ್ ಗೆ ಅರ್ಹತೆ ಪಡೆಯಲು ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.

ಕಳೆದ ಮೂರು ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದ ರಾಹುಲ್, ಬಾಂಗ್ಲಾ ವಿರುದ್ಧ ಭರ್ಜರಿ ಹೊಡೆತಗಳ ಮೂಲಕ ಮಿಂಚಿದರು. 32 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 50 ರನ್’ಗಳಿಸಿ ಶಾಕಿಬ್’ಗೆ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ಕೇವಲ 2 ರನ್’ಗಳಿಸಿ ನಿರ್ಗಮಿಸಿದರು.

ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಫಾರ್ಮ್ ಮುಂದುವರಿಸಿದ ವಿರಾಟ್ ಕೊಹ್ಲಿ ಮತ್ತೊಮ್ಮೆ ಅರ್ಧಶತಕಗಳಿಸಿ ಅಬ್ಬರಿಸಿದರು. 44 ಎಸೆತಗಳಲ್ಲಿ8 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ ಮಾಜಿ ನಾಯಕ, 64 ರನ್’ಗಳಿಸಿ ಅಜೇಯರಾಗುಳಿದರು.

Join Whatsapp
Exit mobile version