Home ಟಾಪ್ ಸುದ್ದಿಗಳು ಆಸ್ತಿ ವಂಚನೆ ಪ್ರಕರಣ: ಖ್ಯಾತ ನಟ ಸುರೇಶ್ ಗೋಪಿ ಸಹೋದರನ ಬಂಧನ

ಆಸ್ತಿ ವಂಚನೆ ಪ್ರಕರಣ: ಖ್ಯಾತ ನಟ ಸುರೇಶ್ ಗೋಪಿ ಸಹೋದರನ ಬಂಧನ

ಕೊಯಮತ್ತೂರು: ನ್ಯಾಯಾಲಯದ ಆದೇಶವನ್ನು ಮರೆಮಾಚಿ, ಅಮಾನ್ಯವಾದ ಹಕ್ಕು ಪತ್ರವನ್ನು ಬಳಸಿ 97 ಲಕ್ಷ ರೂಪಾಯಿಗೆ ಆಸ್ತಿಯೊಂದನ್ನು ಮಾರಾಟ ಮಾಡಿದ ಆರೋಪದ ಮೇಲೆ ಮಲಯಾಳಂನ ಖ್ಯಾತ ನಟ ಹಾಗೂ ಸಂಸದ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿಯನ್ನು ಕೊಯಮತ್ತೂರು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ: ನವಕರೈ ಎಂಬಲ್ಲಿ 4.52 ಎಕರೆ ಜಮೀನನ್ನು ಮಯಿಲ್ ಸಾಮಿ ಎಂಬಾತನಿಂದ ಸುನಿಲ್ ಗೋಪಿ ಖರೀದಿಸಿದ್ದರು. ಆದರೆ ಕಾರಣಾಂತರಗಳಿಂದ ಈ ಖರೀದಿ ಪ್ರಕ್ರಿಯೆಯು ಕೋರ್ಟ್‌ ಮೆಟ್ಟಿಲೇರಿತ್ತು. ಆಗ ಕೋರ್ಟ್‌ ಈ ಜಮೀನಿಗೆ ಸಂಬಂಧಿಸಿದಂತೆ ಮಾಡಿರುವ ಬಾಂಡ್ ನೋಂದಣಿಯನ್ನು ಅಸಿಂಧು ಎಂದು ಘೋಷಿಸಿತ್ತು.

ಇದಾದ ಬಳಿಕ ಸುನೀಲ್ ಗೋಪಿ, ಮೋಸದಿಂದ ಈ ಜಮೀನನ್ನು ಗಿರಿಧರನ್ ಎಂಬುವವರಿಗೆ 97 ಲಕ್ಷ ರೂಪಾಯಿಗಳಿಗೆ
ಮಾರಾಟ ಮಾಡಿದ್ದರು. ಸುನಿಲ್ ಗೋಪಿ ಅವರ ಸಂಬಂಧಿಕರ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಠೇವಣಿ ಮಾಡಲಾಗಿತ್ತು. 2021ರ ನವೆಂಬರ್ 24ರಂದು ನೋಂದಣಿ ಪ್ರಕ್ರಿಯೆ ನಡೆದಿತ್ತು. ಆದರೆ ಸಂಶಯಗೊಂಡು ಜಮೀನಿನ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ತಾವು ಮೋಸ ಹೋಗಿರುವುದು ಗಿರಿಧರನ್‌’ಗೆ ಅರಿವಾಗಿದೆ. ಆ ಬಳಿಕ ಅವರು ಸುನೀಲ್ ಗೋಪಿ ವಿರುದ್ಧ ದೂರು ದಾಖಲಿಸಿದ್ದರು.

Join Whatsapp
Exit mobile version