ನವದೆಹಲಿ: ಪದ್ಮ ಪ್ರಶಸ್ತಿ ನೀಡುವುದು ಯಾವುದೇ ಸರ್ಕಾರವಲ್ಲ, ದೇಶ ಎಂದು ಜಮ್ಮು ಕಾಶ್ಮೀರದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ.
ಸಾರ್ವಜನಿಕ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಜಮ್ಮು ಕಾಶ್ಮೀರದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಕೇಂದ್ರ ಸರ್ಕಾರ ಪದ್ಮ ಭೂಷಣ ನೀಡಿದೆ. ಪ್ರಶಸ್ತಿ ನೀಡಿದ್ದಕ್ಕಾಗಿ ಈ ಹಿಂದಿನಿಂದಲೂ ಪರ-ವಿರೋಧ ಚರ್ಚೆ ನಡೆಯುತ್ತಿದ್ದವು. ಇದರ ಬಗ್ಗೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.
ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿರುವ ಗುಲಾಂ ನಬಿ ಆಜಾದ್, ದೇಶ ನಾವು ಮಾಡುವ ಕೆಲಸವನ್ನು ಗುರುತಿಸುತ್ತದೆ. ನಾವು ಮಾಡಿರುವ ಕೆಲಸಕ್ಕೆ ಮನ್ನಣೆ ಸಿಕ್ಕಾಗ ಸಂತಸವಾಗುತ್ತದೆ. ಜೊತೆಗೆ ಪ್ರಶಸ್ತಿ ದೇಶಕ್ಕಾಗಿ ದುಡಿಯಲು ಪ್ರೇರಣೆ ನೀಡುತ್ತದೆ. ಪ್ರಶಸ್ತಿ ಪಡೆದುಕೊಂಡವರು, ಪ್ರಶಸ್ತಿ ಕೊಟ್ಟವರು ಯಾರು ಎಂಬುದರ ಬಗ್ಗೆ ಯೋಚನೆ ಮಾಡಬಾರದು. ಪದ್ಮ ಪ್ರಶಸ್ತಿ ನೀಡುವುದು ಯಾವುದೇ ಸರ್ಕಾರವಲ್ಲ. ಆದರೆ, ದೇಶ ಈ ಗೌರವ ನೀಡುತ್ತದೆ ಎಂದು ಹೇಳಿದ್ದಾರೆ.