ಮೇ 14ರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಮಂಗಳೂರು ಪ್ರವಾಸ

Prasthutha|

ಮಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ.ಅಬ್ದುಲ್ ನಝೀರ್ ಅವರು ಮೇ 14 ಹಾಗೂ 15 ರಂದು ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.

- Advertisement -

ಮೇ 14ರ ಶನಿವಾರ ಸಂಜೆ 6.45ಕ್ಕೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಅಂದು ರಾತ್ರಿ 8.10ಕ್ಕೆ ಮಂಗಳೂರು ತಲುಪಿ, ನಗರದ ಸಕ್ರ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಮೇ 15ರ ಬೆಳಿಗ್ಗೆ 11 ಗಂಟೆಗೆ ಮೂಡಬಿದಿರೆಯಲ್ಲಿರುವ ಸ್ವಗೃಹಕ್ಕೆ ತೆರಳುವರು, ಮಧ್ಯಾಹ್ನ 12.30ಕ್ಕೆ ಅಲ್ಲಿಂದ ನಿರ್ಗಮಿಸಿ, ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರಲ್ಲಿ ನಡೆಯುವ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ಮಧ್ಯಾಹ್ನ 2.30ಕ್ಕೆ ಕಾರ್ಕಳದಿಂದ ಹೊರಟು 3.35ಕ್ಕೆ ಮಂಗಳೂರು ತಲುಪಿ, ಸಂಜೆ 4.50ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version