ವಿಧಾನ ಪರಿಷತ್ ನ ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟ: ಜೂನ್ 13 ರಂದು ಮತದಾನ

Prasthutha|

ಬೆಂಗಳೂರು: ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಜೂನ್ 13ರಂದು ಚುನಾವಣೆ ನಿಗದಿಪಡಿಸಿ ಚುನಾವಣಾ ಅಯೋಗ ವೇಳಾಪಟ್ಟಿ ಪ್ರಕಟಿಸಿದೆ.

- Advertisement -

ಎರಡು ಪದವೀಧರ ಕ್ಷೇತ್ರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 13 ರಂದು ಮತದಾನ ನಿಗದಿಯಾಗಿದೆ. ಇದರ ಫಲಿತಾಂಶವು ಜೂನ್ 15 ರಂದು ಪ್ರಕಟವಾಗಲಿದೆ. ಈ ನಾಲ್ಕು ಕ್ಷೇತ್ರಗಳು ಜುಲೈ 4ರಂದು ಖಾಲಿಯಾಗುತ್ತಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವಿಧಾನ ಪರಿಷತ್ ನ ಈ ನಾಲ್ಕು ಸ್ಥಾನಗಳಿಗೆ ಮೇ 19 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮೇ 26 ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಜೂನ್ 15 ರಿಂದ 17 ರವೆರೆಗೆ ಫಲಿತಾಂಶ ಪ್ರಕ್ರಿಯೆ ನಡೆಯಲಿದೆ ಎಂದು ಆಯೋಗ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೆ.ಟಿ. ಶ್ರೀಕಂಠೇಗೌಡ, ಹನುಮಂತ ನಿರಾಣಿ, ಅರುಣ್ ಶಹಾಪುರ ಅವರ ಸದಸ್ಯತ್ವ ಜುಲೈ 4ರಂದು ಕೊನೆಗೊಳ್ಳಲಿದೆ.

Join Whatsapp
Exit mobile version