Home ಟಾಪ್ ಸುದ್ದಿಗಳು ವಕ್ಫ್ ಕಾಯ್ದೆಯ ಸಾಂವಿಧಾನಿಕತೆ ಪ್ರಶ್ನಿಸಿದ ಅರ್ಜಿಯ ವಿಚಾರಣೆ: ವಕ್ಫ್ ಮಂಡಳಿಯ ಪ್ರತಿಕ್ರಿಯೆ ಕೋರಿದ ದೆಹಲಿ ಹೈಕೋರ್ಟ್

ವಕ್ಫ್ ಕಾಯ್ದೆಯ ಸಾಂವಿಧಾನಿಕತೆ ಪ್ರಶ್ನಿಸಿದ ಅರ್ಜಿಯ ವಿಚಾರಣೆ: ವಕ್ಫ್ ಮಂಡಳಿಯ ಪ್ರತಿಕ್ರಿಯೆ ಕೋರಿದ ದೆಹಲಿ ಹೈಕೋರ್ಟ್

ನವದೆಹಲಿ: 1995 ರ ವಕ್ಫ್ ಕಾಯ್ದೆಯು ಸಂವಿಧಾನದ ಅನುಚ್ಛೇದ 12, 13, 14, 15, 21, 25, 26 ಮತ್ತು 300 ಎ ಅನ್ನು ಉಲ್ಲಂಘಿಸಿದೆ ಎಂದು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ ನಿಂದ ಪ್ರತಿಕ್ರಿಯೆಯನ್ನು ಕೋರಿದೆ.


ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿಯ ಬಗ್ಗೆ ನೋಟಿಸ್ ಜಾರಿ ಮಾಡಿದ್ದು, ಈ ವಿಷಯದಲ್ಲಿ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಪ್ರತಿವಾದಿಗಳಿಗೆ ನಾಲ್ಕು ವಾರಗಳ ಕಾಲಾವಕಾಶವನ್ನು ನೀಡಿದೆ.


ದೇವೇಂದ್ರನಾಥ್ ತ್ರಿಪಾಠಿ ಎಂಬವರು ವಕ್ಫ್ ಕಾಯ್ದೆ, 1995ರ ಸೆಕ್ಷನ್ 4, 5, 6, 7, 8, 9, 14 ಮತ್ತು 16(ಎ)ರ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ವಕ್ಫ್ ನಿಬಂಧನೆಗಳು ಮುಸ್ಲಿಮೇತರರಿಗೆ ಸಮಾನ ಸ್ಥಾನಮಾನವನ್ನು ನಿರಾಕರಿಸುವ ಮತ್ತು ವಕ್ಫ್ ಆಸ್ತಿಗಳಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತವೆ ಎಂದು ಅರ್ಜಿದಾರರು ವಾದಿಸಿದ್ದಾರೆ.


ಮುಸ್ಲಿಂ ವೈಯಕ್ತಿಕ ಕಾನೂನುಗಳು ಸಾಂವಿಧಾನಿಕ ಮೌಲ್ಯಗಳು ಮತ್ತು ಜಾತ್ಯತೀತತೆ, ಸಮಾನತೆಯ ಮೂಲಭೂತ ರಚನೆ ಮತ್ತು ಮೂಲಭೂತ ಲಕ್ಷಣಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಏಕ ರೂಪ ಸಿವಿಲ್ ಕೋಡ್ ನಿಂದ ಮಾತ್ರ ಭ್ರಾತೃತ್ವದ ಮೌಲ್ಯಗಳನ್ನು ಸಾಧಿಸಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Join Whatsapp
Exit mobile version