Home ಟಾಪ್ ಸುದ್ದಿಗಳು ಪ್ರೇಯಸಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹಾಸ್ಟೆಲ್​​ಗೆ ಬಂದ ವಿದ್ಯಾರ್ಥಿ: ಮುಂದೇನಾಯ್ತು?

ಪ್ರೇಯಸಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹಾಸ್ಟೆಲ್​​ಗೆ ಬಂದ ವಿದ್ಯಾರ್ಥಿ: ಮುಂದೇನಾಯ್ತು?

0

ಹರಿಯಾಣ: ಶಿಕ್ಷಣಕ್ಕಾಗಿ ಹಾಸ್ಟೆಲ್ ಸೇರಿಕೊಳ್ಳುವ ವಿದ್ಯಾರ್ಥಿಗಳು ಮಾಡುವ ಕಿತಾಪತಿಗಳು ಒಂದೆರಡಲ್ಲ. ಇದಕ್ಕೆ ಸಂಬಂಧಪಟ್ಟ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹರಿಯಾಣದ ಒಪಿ ಜಿಂದಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನು ತನ್ನ ಗೆಳೆತಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಯಾರಿಗೂ ಗೊತ್ತಾಗದಂತೆ ಬಾಯ್ಸ್ ಹಾಸ್ಟೆಲ್ ಪ್ರವೇಶಿಸುತ್ತಿದ್ದಂತೆ ಹಾಸ್ಟೆಲ್ ವಾರ್ಡನ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಈ ಘಟನೆಯೂ ಹರಿಯಾಣದ ಸೋನಿಪತ್‌ನಲ್ಲಿರುವ ವಿಶ್ವವಿದ್ಯಾಲಯದ ಬಾಯ್ಸ್ ಹಾಸ್ಟೆಲ್‌ ನಲ್ಲಿ ನಡೆದಿದೆ ಎನ್ನಲಾಗಿದೆ.

Ghar ke kalesh ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ವಿದ್ಯಾರ್ಥಿಯೊಬ್ಬನು ತನ್ನ ಗೆಳೆತಿಯನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಬಾಯ್ಸ್ ಹಾಸ್ಟೆಲ್‌ಗೆ ಕರೆತರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಸೂಟ್‌ಕೇಸ್ ತೆರೆಯುತ್ತಿದ್ದು, ಈ ವೇಳೆಯಲ್ಲಿ ಹುಡುಗಿ ಬ್ಯಾಗಿನಿಂದ ಹೊರಬರುವುದನ್ನು ಕಾಣಬಹುದು. ವರದಿಯ ಪ್ರಕಾರ ಸೂಟ್ ಕೇಸ್ ಬ್ಯಾಗ್ ನಲ್ಲಿದ್ದ ಯುವತಿ ಜೋರಾಗಿ ಕಿರುಚಿಕೊಂಡಿದ್ದು ಈ ವೇಳೆಯಲ್ಲಿ ಹಾಸ್ಟೆಲ್ ಸಿಬ್ಬಂದಿ ಸೂಟ್ ಕೇಸ್ ತೆರೆದಿದ್ದಾರೆ ಎನ್ನಲಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಬಗ್ಗೆ ವಿಶ್ವವಿದ್ಯಾನಿಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದಲ್ಲದೆ, ವಿದ್ಯಾರ್ಥಿಯ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆಯೂ ವಿಶ್ವವಿದ್ಯಾನಿಲಯವು ಯಾವುದೇ ಮಾಹಿತಿ ನೀಡಿಲ್ಲ.ಆದರೆ ಈ ವಿಡಿಯೋವೊಂದು ಮೂವತ್ತಾನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಇದು ಆಕೆಯ ಗೆಳೆತಿ’ ಎಂದು ಹೇಳಿದ್ದಾರೆ. ಇನ್ನೊಬ್ಬರು, ‘ಅಬ್ಬಬಾ ಈ ವಿದ್ಯಾರ್ಥಿ ಎಷ್ಟು ಬುದ್ಧಿವಂತ ನೋಡಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊರ್ವ ಬಳಕೆದಾರರು, ‘ಈತನ ಧೈರ್ಯಕ್ಕೆ ಸೆಲ್ಯೂಟ್ ‘ ಎಂದು ಕಾಮೆಂಟ್ ಮಾಡಿದ್ದಾರೆ.

https://twitter.com/priyarajputlive/status/1910944843838169588

NO COMMENTS

LEAVE A REPLY

Please enter your comment!
Please enter your name here

Exit mobile version