Home ಕರಾವಳಿ ಮಂಗಳೂರು | ಸ್ಟೇಟ್ ಬ್ಯಾಂಕ್ ಸಿಟಿ ಬಸ್ ನಿಲ್ದಾಣ ಯಥಾಸ್ಥಿತಿ ಮುಂದುವರೆಸಿ: ವ್ಯಾಪಾರಸ್ಥರ ಒಕ್ಕೂಟ

ಮಂಗಳೂರು | ಸ್ಟೇಟ್ ಬ್ಯಾಂಕ್ ಸಿಟಿ ಬಸ್ ನಿಲ್ದಾಣ ಯಥಾಸ್ಥಿತಿ ಮುಂದುವರೆಸಿ: ವ್ಯಾಪಾರಸ್ಥರ ಒಕ್ಕೂಟ

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಸಿಟಿ ಬಸ್ ನಿಲ್ದಾಣವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ವ್ಯಾಪಾರಸ್ಥರ ಒಕ್ಕೂಟ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.


ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ಪ್ರಮುಖರಾದ ಶ್ರೀನಿವಾಸ್, ಸಿಟಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿರುವುದರಿಂದ ನಮಗೆ ಶೇ.15ರಷ್ಟು ಕೂಡ ವ್ಯಾಪಾರ ಆಗುತ್ತಿಲ್ಲ. ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿದ್ದು, ಕಟ್ಟಡದ ಬಾಡಿಗೆ ಕೂಡ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಸ್ ನಿಲ್ದಾಣವನ್ನು ಈ ಹಿಂದಿನಂತೆಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

Join Whatsapp
Exit mobile version