Home ಟಾಪ್ ಸುದ್ದಿಗಳು ಬ್ಯಾರಿ ಭಾಷೆಯ ‘ಟ್ರಿಪಲ್ ತಲಾಖ್’ ಸಿನೆಮಾ ಗೆ ರಾಜ್ಯ ಪ್ರಶಸ್ತಿ

ಬ್ಯಾರಿ ಭಾಷೆಯ ‘ಟ್ರಿಪಲ್ ತಲಾಖ್’ ಸಿನೆಮಾ ಗೆ ರಾಜ್ಯ ಪ್ರಶಸ್ತಿ

0

ಕುಂದಾಪುರ: 2019 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದ್ದು, ಕುಂದಾಪುರ ಮೂಲದ ಯಾಕೂಬ್ ಖಾದರ್ ಗುಲ್ವಾಡಿ ಅವರ ಮೊದಲ ನಿರ್ದೇಶನದ ಕನ್ನಡದ ಪ್ರಾದೇಶಿಕ ಭಾಷೆಯಾದ ಬ್ಯಾರಿ ಭಾಷೆಯ ಸಿನಿಮಾ ‘ಟ್ರಿಪಲ್ ತಲಾಖ್’ ಗೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಲಭಿಸಿದೆ.


2017 ರಲ್ಲಿ ಗುಲ್ವಾಡಿ ಟಾಕೀಸ್ ಸಂಸ್ಥೆಯ ಮೂಲಕ ರಿಸರ್ವೇಶನ್ ಎಂಬ ಕನ್ನಡ ಸಿನಿಮಾ ನಿರ್ಮಿಸಿ ಅದಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡ ಇದೇ ಸಂಸ್ಥೆಯ ಬ್ಯಾನರ್ ಅಡಿ ಮಾಡಿದ್ದ ಕನ್ನಡದ ಪ್ರಾದೇಶಿಕ ಭಾಷೆಯಾದ ಬ್ಯಾರಿ ಭಾಷೆಯ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆಯುವ ಮೂಲಕ ಸುದ್ದಿ ಮಾಡಿದೆ. ಮುಂಬೈನ ಪ್ರಭನಾರಾಯಣ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ಜೊತೆಯಾಗಿ ಈ ಸಿನಿಮಾ ನಿರ್ಮಿಸಿದ್ದರು.


ತ್ರಿವಳಿ ತಲಾಖ್ ವಿಚಾರದ ಅಮೂಲಾಗ್ರ ವಿಶ್ಲೇಷಣೆಯೊಂದಿಗೆ ಅಂತರಂಗವನ್ನು ಕೆಣಕುವ ಮತ್ತು ಆತ್ಮ ವಿಮರ್ಶೆ ಮಾಡುವಂತೆ ‘ಟ್ರಿಪಲ್ ತಲಾಖ್- ಕುರ್ ಆನ್ ಹೇಳಿಲ್ಲ’ ಚಿತ್ರ ಪ್ರೇರೇಪಿಸುತ್ತದೆ.


ಈ ಹಿಂದೆ ನನ್ನ ಮೊದಲ ನಿರ್ಮಾಣದ ರಿಸರ್ವೇಶನ್ ಸಿನಿಮಾಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಬಂದಿತ್ತು. ಸೂಕ್ಷ್ಮ ಸಂವೇದನೆಯ, ಗಟ್ಟಿ ಕಥಾಹಂದರವುಳ್ಳ ನನ್ನ ಮೊದಲ ನಿರ್ದೇಶನದ ಟ್ರಿಪಲ್ ತಲಾಖ್ ಗೆ ಕನ್ನಡದ ಪುಟಾಣಿ ಪ್ರಾದೇಶಿಕ ಭಾಷೆಯಾದ ಬ್ಯಾರಿ ಭಾಷೆಯ ರಾಜ್ಯ ಪ್ರಶಸ್ತಿ ಬಂದಿದ್ದು ಸಂತೋಷವಾಗಿದೆ. ಈ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೂ, ತಂತ್ರಜ್ಞರಿಗು, ಸಹ ನಿರ್ಮಾಪಕರಿಗು ಮತ್ತು ಸಹಕರಿಸಿದವರಿಗೆ ಕೃತಜ್ಞತೆ ಎಂದು ಪ್ರಶಸ್ತಿ ವಿಜೇತ ನಿರ್ದೇಶಕ, ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version