ಕೊಲಂಬೊ: ಕಳೆದ ವಾರ ವ್ಯಾಪಕ ಪ್ರತಿಭಟನೆಗಳ ನಂತರ ಗೋಟಬಯಾ ರಾಜಪಕ್ಸೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ ಬಿಕ್ಕಟ್ಟಿನಿಂದ ಬಳಲುತ್ತಿರುವ ದೇಶದಲ್ಲಿ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಶ್ರೀಲಂಕಾ ಸಂಸತ್ತು ಬುಧವಾರ ಮತದಾನ ಆರಂಭಿಸಿದೆ.
ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಆಡಳಿತ ಪಕ್ಷದ ಶಾಸಕ ದುಲ್ಲಾಸ್ ಅಲಹಪ್ಪೆರುಮ ಮತ್ತು ಎಡಪಂಥೀಯ ಜನತಾ ವಿಮುಕ್ತಿ ಪೆರಮುನಾ ಪಕ್ಷದ ನಾಯಕ ಅನುರಕುಮಾರ ದಿಸ್ಸನಾಯಕ ಕಣದಲ್ಲಿದ್ದಾರೆ. ಮಹಿಂದಾ ರಾಜಪಕ್ಸೆ ಅವರು ಮತ ಚಲಾಯಿಸಲು ಸದನದಲ್ಲಿದ್ದಾರೆ.