Home ಟಾಪ್ ಸುದ್ದಿಗಳು ಸ್ಪುಟ್ನಿಕ್‌ ವಿ ಲಸಿಕೆ ತಯಾರಿಕೆಗೆ ಅನುಮತಿ ಕೋರಿದ ಸೀರಂ ಸಂಸ್ಥೆ

ಸ್ಪುಟ್ನಿಕ್‌ ವಿ ಲಸಿಕೆ ತಯಾರಿಕೆಗೆ ಅನುಮತಿ ಕೋರಿದ ಸೀರಂ ಸಂಸ್ಥೆ

ನವದೆಹಲಿ : ಕೋವಿಡ್‌ ಲಸಿಕೆ ʼಸ್ಪುಟ್ನಿಕ್‌ ವಿʼ ಲಸಿಕೆ ತಯಾರಿಸಲು ಅನುಮತಿ ಕೋರಿ ಸೀರಂ ಇನ್ಸ್‌ ಟಿಟ್ಯೂಟ್‌ ಆಫ್‌ ಇಂಡಿಯಾ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ವರದಿಗಳು ತಿಳಿಸಿತವೆ. ಲಸಿಕೆಯ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಅನುಮೋದನೆ ನೀಡುವಂತೆಯೂ ಕಂಪೆನಿ ಕೋರಿಕೆ ಸಲ್ಲಿಸಿದೆ.

ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್‌ ವಿ ಲಸಿಕೆಯನ್ನು ಪ್ರಸ್ತುತ ಭಾರತದಲ್ಲಿ ಹೈದರಾಬಾದ್‌ ನ ಡಾ. ರೆಡ್ಡೀಸ್‌ ಲ್ಯಾಬೊರೇಟರಿಸ್‌ ತಯಾರಿಸುತ್ತಿದೆ.

ಕೋವಿಶೀಲ್ಡ್‌ ನ ೧೦ ಕೋಟಿ ಡೋಸ್‌ ಗಳನ್ನು ತಯಾರಿಸಿ ಪೂರೈಸುತ್ತೇವೆ ಎಂದು ಎಸ್‌ ಐಐ ಸಂಸ್ಥೆ ಸರಕಾರಕ್ಕೆ ಜೂನ್‌ ನಲ್ಲಿ ಭರವಸೆ ನೀಡಿದೆ.

Join Whatsapp
Exit mobile version