Home ಗಲ್ಫ್ ಅಬುಧಾಬಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಯುವಕನಿಗೆ ಹೊಸ ಜೀವನ ನೀಡಿದ ಎಂಎ ಯೂಸುಫಲಿ!

ಅಬುಧಾಬಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಯುವಕನಿಗೆ ಹೊಸ ಜೀವನ ನೀಡಿದ ಎಂಎ ಯೂಸುಫಲಿ!

ಅಬುಧಾಬಿ: ಮರಣದಂಡನೆಗೆ ಗುರಿಯಾಗಿ ತನ್ನ ಜೀವನದ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದ ಯುವಕನಿಗೆ ಲುಲು ಗ್ರೂಪ್ ಚೇರ್ಮೆನ್ ಎಂ.ಎ. ಯೂಸುಫಲಿ ಪುನರ್ಜನ್ಮ ನೀಡಿದ್ದಾರೆ.  

ಅಬುಧಾಬಿ ಮುಸಾಫಾದಲ್ಲಿ ವರ್ಷಗಳ ಹಿಂದೆ ವಾಹನ ಚಾಲನೆ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿ ಸುಡಾನ್ ನ ಬಾಲಕನೊಬ್ಬನ ಸಾವಿಗೆ ಕಾರಣನಾಗಿದ್ದ ಕೇರಳದ ತೃಶೂರ್ ಜಿಲ್ಲೆಯ ಬೆಕ್ಸ್ ಕೃಷ್ಣನ್ (45) ಅವರಿಗೆ ಅಬುಧಾಬಿ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯು ಯೂಸುಫಲಿ ಅವರ ಮಧ್ಯಪ್ರವೇಶದಿಂದಾಗಿ ತಪ್ಪಿ ಹೋಗಿದೆ.

ಅಪಘಾತದಲ್ಲಿ ಮೃತಪಟ್ಟ ಬಾಲಕನ ಕುಟುಂಬದೊಂದಿಗೆ ಯೂಸುಫಲಿ ನಿರಂತರವಾಗಿ ಚರ್ಚೆ ನಡೆಸಿ, 5 ಲಕ್ಷ ದಿರ್ಹಮ್ (1 ಕೋಟಿ ರೂ)ಗಳನ್ನು ನೀಡುವ ಮೂಲಕ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದಾಗಲು ಕಾರಣರಾಗಿದ್ದಾರೆ.

ಸಿಸಿಟಿವಿ ಸಾಕ್ಷ್ಯದ ಆಧಾರದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೆಕ್ಸ್ ಕೃಷ್ಣನ್ ಚಲಾಯಿಸುತ್ತಿದ್ದ ಕಾರು ಹರಿದಾಗ ಸುಡಾನ್ ಬಾಲಕ ಸಾವನ್ನಪ್ಪಿದ್ದಾನೆ ಎಂದು ಯುಎಇ ಸುಪ್ರೀಂ ಕೋರ್ಟ್ 2013 ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅಬುಧಾಬಿಯ ಅಲ್ ವತ್ಬಾ ಜೈಲಿನಲ್ಲಿದ್ದ ಬೆಕ್ಸ್ ನ ಬಿಡುಗಡೆಗಾಗಿ ಕುಟುಂಬದ ಪ್ರಯತ್ನಗಳೆಲ್ಲಾ ವಿಫಲವಾದಾಗ ಸಂಬಂಧಪಟ್ಟವರ ಮೂಲಕ ಬಿಡುಗಡೆಗಾಗಿ ಮಧ್ಯಪ್ರವೇಶಿಸುವಂತೆ ಕುಟುಂಬವು ಯುಸುಫಲಿ ಅವರಿಗೆ ಮನವಿ ಮಾಡಿತು. ಪ್ರಕರಣದ ಬಗ್ಗೆ ಮೃತಪಟ್ಟ ಸುಡಾನ್ ಬಾಲಕನ ಕುಟುಂಬದೊಂದಿಗೆ ಯೂಸುಫಲಿ ಹಲವಾರು ಚರ್ಚೆಗಳನ್ನು ನಡೆಸಿ ಪರಿಹಾರವನ್ನು ನಿಡುವ ಮೂಲಕ ಬೆಕ್ಸ್ ಕೃಷ್ಣನ್ ಅವರ ಬಿಡುಗಡೆಗೆ ಕಾರಣರಾಗಿದ್ದಾರೆ.

ಬೆಕ್ಸ್ ಕೃಷ್ಣನ್ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ತಾಯ್ನಾಡಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version