Home ಟಾಪ್ ಸುದ್ದಿಗಳು ದಿಲ್ಲಿ ಹೈಕೋರ್ಟ್ ನಿಂದ ಪತಂಜಲಿ ರಾಮ್ ದೇವ್ ಗೆ ಸಮನ್ಸ್

ದಿಲ್ಲಿ ಹೈಕೋರ್ಟ್ ನಿಂದ ಪತಂಜಲಿ ರಾಮ್ ದೇವ್ ಗೆ ಸಮನ್ಸ್

ಹೊಸದಿಲ್ಲಿ: ಕೋವಿಡ್ ಸೋಂಕನ್ನು ಪತಂಜಲಿಯ ಕೊರೊನಿಲ್ ಕಿಟ್ ಗುಣಪಡಿಸುತ್ತದೆ ಎಂದು ಸುಳ್ಳು ಮಾಹಿತಿ ನೀಡುವುದನ್ನು ತಡೆಯುವಂತೆ ಕೋರಿ ದಿಲ್ಲಿ ವೈದ್ಯಕೀಯ ಸಂಘ (ಡಿಎಂಎ) ಸಲ್ಲಿಸಿರುವ ಮೊಕದ್ದಮೆಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ಗುರುವಾರ ಯೋಗ ಗುರು ರಾಮ್ ದೇವ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ,

ಜುಲೈ 13 ರಂದು ವಿಚಾರಣೆಯ ಮುಂದಿನ ದಿನಾಂಕದ ತನಕ ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು. ಮೊಕದ್ದಮಗೆ ಉತ್ತರಿಸುವಂತೆ ಹೈಕೋರ್ಟ್ ಮೌಖಿಕವಾಗಿ ರಾಮದೇವ್ ಪರ ವಕೀಲರಿಗೆ ತಿಳಿಸಿದೆ.
ಅಲೋಪಥಿ ಔಷಧವು ಕೊರೋನವೈರಸ್ ಅನ್ನು ಗುಣಪಡಿಸುವುದಿಲ್ಲ ಎಂಬ ರಾಮ್ ದೇವ್ ಹೇಳಿಕೆಯು ಜನರ ದಾರಿ ತಪ್ಪಿಸುವ ಜೊತೆಗೆ ಅವರ ಹೇಳಿಕೆಯು ಪರಿಣಾಮ ಬೀರುತ್ತದೆ ಎಂದು ಡಿಎಂಎ ತನ್ನ ವೈದ್ಯರ ಸದಸ್ಯರ ಪರವಾಗಿ ಹೇಳಿದೆ.

Join Whatsapp
Exit mobile version