Home ಟಾಪ್ ಸುದ್ದಿಗಳು ಸಾಮಾಜಿಕ ಕಾರ್ಯಕರ್ತ ಕಬೀರ್ ಬಾಯಂಬಾಡಿಗೆ ಪ್ರತಿಷ್ಠಿತ ಯುಎಇ ಗೋಲ್ಡನ್ ವೀಸಾದ ಗೌರವ

ಸಾಮಾಜಿಕ ಕಾರ್ಯಕರ್ತ ಕಬೀರ್ ಬಾಯಂಬಾಡಿಗೆ ಪ್ರತಿಷ್ಠಿತ ಯುಎಇ ಗೋಲ್ಡನ್ ವೀಸಾದ ಗೌರವ

ಅಬುಧಾಬಿ: ಗಣ್ಯರು, ಸಾಧಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನೀಡುವ ಗೋಲ್ಡನ್ ವೀಸಾದ ಗೌರವಕ್ಕೆ ಕೆಸಿಎಫ್ ಅಬಧಾಬಿ ಸಮಿತಿಯ ಪ್ರದಾನ ಕಾರ್ಯದರ್ಶಿ ಹಾಗೂ ಆರೋಗ್ಯ ಕಾರ್ಯಕರ್ತರೂ ಹಾಗಿರುವ ಕಬೀರ್ ಬಾಯಾಂಬಾಡಿ ಬಾಜನರಾಗಿದ್ದಾರೆ.

ಕಬೀರ್ ಬಾಯಂಬಾಡಿ ಮೂಲತ ಪುತ್ತೂರು ತಾಲೂಕಿನವರಾಗಿದ್ದು ಹಲವಾರು ವರ್ಷಗಳಿಂದ ಅನಿವಾಸಿಯಾಗಿ ಆರೋಗ್ಯ ಸೇವೆಯ ವಲಯದಲ್ಲಿ ವೃತ್ತಿ ನಿರತರಾಗಿದ್ದಾರೆ.

ಕೋವಿಡ್ ಸಮಯದಲ್ಲಿ ಇವರು ನಡೆಸಿದ ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ. ಗೋಲ್ಡನ್ ವೀಸಾ ಗೌರವಕ್ಕೆ ಪಾತ್ರರಾದ ಕಬೀರ್ ಬಾಯಂಬಾಡಿಯವರನ್ನು ಕೆಸಿಎಫ್ ಅಬುಧಾಬಿ ಸಮಿತಿ ಅಭಿನಂದಿಸಿದೆ.

Join Whatsapp
Exit mobile version