ಮಂಗಳೂರು: ಕೆಸಿಸಿ ಟ್ರಸ್ಟ್ ನ ಮಹತ್ವಾಕಾಂಕ್ಷೆ ಯೋಜನೆಯಾದ ಮಾಸಿಕವಾಗಿ ಹಣ ಪಾವತಿಸಿ ಉಮ್ರಾ ನಿರ್ವಹಿಸುವ ಹೊಸ ಯೋಜನೆಯನ್ನು ಘೋಷಿಸಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಹೊಸ ಯೋಜನೆಯಲ್ಲಿ ಮಾಸಿಕ 3000 ರೂ. ಪಾವತಿಸಿ ಪವಿತ್ರ ಉಮ್ರಾ ಕೈಗೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 23 ಕೊನೆ ದಿನವಾಗಿರುತ್ತದೆ. ಈ ಹಿಂದೆ ಇದ್ದ ಮಾಸಿಕ 1000 ರೂ. ಯೋಜನೆಯ ಬದಲಿಗೆ ಈ ಯೋಜನೆಯನ್ನು ತರಲಾಗಿದೆ.
1000 ರೂ. ಪಾವತಿಸಿ ಪವಿತ್ರ ಉಮ್ರಾ ನಿರ್ವಹಿಸುವ ಯೋಜನೆಯು ಕಳೆದ ರಂಝಾನ್ 27ಕ್ಕೆ ಕೊನೆಗೊಂಡಿತ್ತು. ಆ ಬಳಿಕ ಹಲವರು ಕಚೇರಿಯನ್ನು ಸಂಪರ್ಕಿಸಿ ಮಾಸಿಕ ಯೋಜನೆಯನ್ನು ಮುಂದುವರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಹೊಸ ಯೋಜನೆಯನ್ನು ಘೋಷಣೆ ಮಾಡಿದೆ.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಕಚೇರಿಯ ಮೊಬೈಲ್ ಸಂಖ್ಯೆ 88804333630 ಅಥವಾ 9483132020 (ವಾಟ್ಸ್ ಆ್ಯಪ್) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.