ಮುಂಬಯಿ: ಮುಂಬಯಿಯಲ್ಲಿ ಡಿಆರ್ ಐ- ಆದಾಯ ತನಿಖಾ ನಿರ್ದೇಶನಾಲಯದವರು ಹಾಂಗ್ ಕಾಂಗ್ ನಿಂದ ಕಳ್ಳ ಸಾಗಾಣಿಕೆ ಮಾಡಿಕೊಂಡಿರುವ 42.86 ಕೋಟಿ ರೂಪಾಯಿ ಮೌಲ್ಯದ 3,646 ಹೈ ಎಂಡ್ ಐಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಂಗ್ ಕಾಂಗ್ ವಿಮಾನವು ಮುಂಬಯಿಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಲೇ ಡಿಆರ್ ಐನವರು ಮಾಹಿತಿಯಂತೆ ಯಾವುದೇ ಅಜಾಗರೂಕತೆಗೆ ಅವಕಾಶವಾಗದಂತೆ ಐಫೋನ್ ಗಳನ್ನು ವಶಪಡಿಸಿಕೊಂಡರು. ರೂ. 70,000ದಿಂದ ರೂ. 1,80,000ದವರೆಗೆ ಇರುವ ಈ ಫೋನ್ ಗಳನ್ನು ನೇರ ಆಮದು ಮಾಡಿಕೊಂಡರೆ ಅದರ ಬೆಲೆಯ ಮೇಲೆ 40% ಸುಂಕ ಕಟ್ಟಬೇಕು.
ಕಳ್ಳ ಹಾದಿಯಿಂದ ತಂದರೆ ಮಾರುವವರಿಗೂ ಲಾಭ ಮತ್ತು ಕೊಳ್ಳುವವರಿಗೂ ಒಂದಷ್ಟು ಲಾಭ ದೊರೆಯುತ್ತದೆ. ಇದಕ್ಕಾಗಿಯೇ ಕಳ್ಳ ಸಾಗಾಣಿಕೆದಾರರು ಯಾವಾಗಲೂ ತಮ್ಮದೊಂದು ನೆಟ್ ವರ್ಕ್ ರಚಿಸಿಕೊಂಡಿರುತ್ತಾರೆ ಎಂದು ತನಿಖಾದಾರರು ಹೇಳಿದರು.