Home Uncategorized ಸಿಕ್ಕಿಂ ಪ್ರವಾಹ: ಸಾವಿನ ಸಂಖ್ಯೆ 14ಕ್ಕೆ ಏರಿಕೆ, 102 ಮಂದಿ ನಾಪತ್ತೆ

ಸಿಕ್ಕಿಂ ಪ್ರವಾಹ: ಸಾವಿನ ಸಂಖ್ಯೆ 14ಕ್ಕೆ ಏರಿಕೆ, 102 ಮಂದಿ ನಾಪತ್ತೆ

ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಪ್ರವಾಹದಲ್ಲಿ ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ. 102 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ಸರ್ಕಾರ ತಿಳಿಸಿದೆ.


ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ 3,000 ಪ್ರವಾಸಿಗರು ಸಿಲುಕಿರುವ ಆತಂಕ ವ್ಯಕ್ತವಾಗಿದೆ.
ವಾಯುವ್ಯ ಸಿಕ್ಕಿಂನಲ್ಲಿರುವ ಸೌತ್ ಲೊನಾಕ್ ಸರೋವರದಲ್ಲಿ ಬುಧವಾರ ಬೆಳಗ್ಗೆ ಸುರಿದ ನಿರಂತರ ಮಳೆಗೆ ಮೇಘಸ್ಫೋಟ ಉಂಟಾಗಿದೆ. ಇದರಿಂದ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಯಿತು. ಇದರಿಂದಾಗಿ ಸಿಂಗ್ಟಾಮ್ ಪಟ್ಟಣದ ತೀಸ್ತಾ ನದಿಯ ಇಂದ್ರೇಣಿ ಸೇತುವೆ ಮೂಲಕ ಪ್ರವಾಹ ಸಾಗಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಲೂಟಾರ್ ಕುಗ್ರಾಮದ ಮತ್ತೊಂದು ಸಂಪರ್ಕ ಸೇತುವೆ ಕೂಡ ಕೊಚ್ಚಿ ಹೋಗಿದೆ.

Join Whatsapp
Exit mobile version