Home Uncategorized ಪ್ರಜ್ವಲ್‌ ರೇವಣ್ಣರನ್ನು ಸದ್ಯದಲ್ಲೇ ಪುರುಷತ್ವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ

ಪ್ರಜ್ವಲ್‌ ರೇವಣ್ಣರನ್ನು ಸದ್ಯದಲ್ಲೇ ಪುರುಷತ್ವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣರನ್ನು ಸದ್ಯದಲ್ಲೇ ಪುರುಷತ್ವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಅಶ್ಲೀಲ ವೀಡಿಯೋದಲ್ಲಿರುವುದು ನಾನಲ್ಲ, ಅತ್ಯಾಚಾರ ಎಸಗಿಲ್ಲ ಮುಂತಾಗಿ ಪ್ರಜ್ವಲ್ ಅಫಿದವಿತ್‌ ಸಲ್ಲಿಸಿದರೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಈ ಹಿಂದೆ ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ ಸಹಿತ ಕೆಲವು ಆರೋಪಿಗಳಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.

ಹಾಸನದ ಪ್ರಜ್ವಲ್‌ ನಿವಾಸದಿಂದ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಸಂಸದರು ಬಳಸುತ್ತಿದ್ದ ಹಾಸಿಗೆ, ಹೊದಿಕೆ ಇತ್ಯಾದಿ ವಸ್ತುಗಳಲ್ಲಿದ್ದ ಡಿಎನ್‌ಎಗೂ ಪ್ರಜ್ವಲ್‌ ಡಿಎನ್‌ಎಗೂ ಹೋಲಿಕೆ ಮಾಡಿ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸುವ ಸಾಧ್ಯತೆಗಳಿವೆ.

Join Whatsapp
Exit mobile version