ರಾಯ್‌ಬರೇಲಿ: ನಾನು ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ, ನಿಮ್ಮವನು ಎಂದು ಪರಿಗಣಿಸಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್‌ಬರೇಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜನರಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ.
ನಿಮ್ಮ ಪ್ರೀತಿ ನನ್ನನ್ನು ಏಕಾಂಗಿಯಾಗಿರಲು ಬಿಡಲಿಲ್ಲ. ನಮ್ಮ ಕುಟುಂಬದ ನೆನಪುಗಳು ರಾಯ್ ಬರೇಲಿಯೊಂದಿಗೆ ಬೆಸೆದುಕೊಂಡಿವೆ. ಬಹಳ ಸಮಯದ ನಂತರ ಇಂದು ನಿಮ್ಮ ನಡುವೆ ಬರಲು ನನಗೆ ಅವಕಾಶ ಸಿಕ್ಕಿರುವುದು ನನಗೆ ಸಂತೋಷ ತಂದಿದೆ ಎಂದು ಅವರು ಹೇಳಿದರು. ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ನನ್ನ ತಲೆ ನಿಮ್ಮ ಮುಂದೆ ಪೂಜ್ಯಭಾವದಿಂದ ಬಾಗುತ್ತದೆ ಎಂದಿದ್ದಾರೆ.
20 ವರ್ಷಗಳ ಕಾಲ ಸಂಸದೆಯಾಗಿ ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದೀರಿ. ಇದು ನನ್ನ ಜೀವನದ ಅತಿದೊಡ್ಡ ಆಸ್ತಿ. ರಾಯ್ ಬರೇಲಿ ನನ್ನ ಕುಟುಂಬ, ಅದೇ ರೀತಿ ಅಮೇಥಿ ಕೂಡ ನನ್ನ ಮನೆ. ಇದು ನನ್ನ ಜೀವನದ ಕೋಮಲ ನೆನಪುಗಳನ್ನ ಮಾತ್ರ ಹೊಂದಿಲ್ಲ, ಆದರೆ ಕಳೆದ 100 ವರ್ಷಗಳಿಂದ ನಮ್ಮ ಕುಟುಂಬವು ಈ ಮಣ್ಣಿನಲ್ಲಿ ಬೇರೂರಿದೆ. ರಾಹುಲ್ ಗಾಂಧಿ ನಿಮ್ಮನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ” ಎಂದು ಹೇಳಿದರು.