Home ಟಾಪ್ ಸುದ್ದಿಗಳು 5 ವರ್ಷ ಸಿದ್ದರಾಮಯ್ಯರವರೇ ಸಿಎಂ ಆಗಿರ್ತಾರೆ: ಸಚಿವ ಝಮೀರ್ ಅಹ್ಮದ್

5 ವರ್ಷ ಸಿದ್ದರಾಮಯ್ಯರವರೇ ಸಿಎಂ ಆಗಿರ್ತಾರೆ: ಸಚಿವ ಝಮೀರ್ ಅಹ್ಮದ್

0

ಬೆಂಗಳೂರು : ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. 5 ವರ್ಷ ಪೂರ್ತಿ ಸಿದ್ದರಾಮಯ್ಯರವರೇ ಸಿಎಂ ಆಗಿರ್ತಾರೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಾ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವ ಝಮೀರ್, ಆಪರೇಷನ್ ಕಮಲ ಅಸಾಧ್ಯ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಗಲು ಕನಸು ಕಾಣ್ತಿದ್ದಾರೆ ಎಂದರು. 56 ಜನ ಶಾಸಕರನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡೋದು ಸಾಧ್ಯನಾ ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿ ಹೈಕಮಾಂಡ್ ನ್ನು ಓಲೈಸಿಕೊಳ್ಳಲು ಹೀಗೆಲ್ಲಾ ಮಾತಾಡ್ತಿದ್ದಾರೆ. ರಮೇಶ್ ಮೊದಲು ಬಿಜೆಪಿಯಲ್ಲಿ ಇರೋ ಶಾಸಕರನ್ನು ಉಳಿಸಿಕೊಳ್ಳಲಿ. ನಂತರ ಕಾಂಗ್ರೆಸ್ ಶಾಸಕರನ್ನು ಕರೆಯಲಿ ಎಂದು ಝಮೀರ್ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version