ಬೆಂಕಿ ಇಲ್ಲದೆ ಹೊಗೆಯಾಡದು; ಬಿಎಸ್‍ವೈ, ಹೈಕಮಾಂಡ್ ಎರಡೂ ದುರ್ಬಲ : ಸಿದ್ದರಾಮಯ್ಯ

Prasthutha|

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

- Advertisement -

ಯಡಿಯೂರಪ್ಪ ಅವರನ್ನು ಬದಲಿಸಿ ಎಂದು ನಾವ್ಯಾರೂ ಒತ್ತಾಯ ಮಾಡಿಲ್ಲ. ಆ ಬಗ್ಗೆ ಚರ್ಚೆ ನಡೆಯುತ್ತಿದೆ ದೆಹಲಿಯಲ್ಲಿ ಎಂದು ಹೇಳಿದ್ದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಾದರೆ ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್, ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಸಚಿವ ಯೋಗೀಶ್ವರ್ ವಿರುದ್ಧ ಏಕೆ ಬಿಜೆಪಿ ಹೈ ಕಮಾಂಡ್ ಕ್ರಮ ಕೈಗೊಂಡಿಲ್ಲ.

ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಎರಡೂ ದುರ್ಬಲ. ಅರುಣಸಿಂಗ್ ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ಹಾಗಾದರೆ ಬದಲಾವಣೆ ಆಗಬೇಕು ಎಂದವರ ವಿರುದ್ಧ ಏಕೆ ಕ್ರಮವಿಲ್ಲ. ಇದರಿಂದ ರವಾನೆಯಾಗುವ ಸಂದೇಶ ಏನು?ಯಡಿಯೂರಪ್ಪ ಅವರೇ ಕಳಪೆ ಮುಖ್ಯಮಂತ್ರಿ. ಇನ್ನು ಬೇರೆಯವರು ಹೇಗಿರಬೇಕು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

Join Whatsapp
Exit mobile version