Home ಟಾಪ್ ಸುದ್ದಿಗಳು ಶಾರ್ಟ್‌ಕಟ್ ಪೊಲಿಟಿಕ್ಸ್ ದೇಶವನ್ನೇ ನಾಶ ಮಾಡುತ್ತದೆ: ಪ್ರಧಾನಿ ಮೋದಿ

ಶಾರ್ಟ್‌ಕಟ್ ಪೊಲಿಟಿಕ್ಸ್ ದೇಶವನ್ನೇ ನಾಶ ಮಾಡುತ್ತದೆ: ಪ್ರಧಾನಿ ಮೋದಿ

ಜಾರ್ಖಂಡ್​​: ದೇಶವು ಶಾರ್ಟ್‌ಕಟ್ ರಾಜಕೀಯದ ಪ್ರಮುಖ ಸವಾಲನ್ನು ಎದುರಿಸುತ್ತಿದೆ. ಆದರೆ ಶಾರ್ಟ್‌ಕಟ್ ಅನ್ನು ಆಧರಿಸಿದ ರಾಜಕೀಯವು ಶಾರ್ಟ್ ಸರ್ಕ್ಯೂಟ್ ಆಗುತ್ತದೆ ಎಂಬುದು ದೊಡ್ಡ ಸತ್ಯ. ಅದು ದೇಶವನ್ನು ನಾಶಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇವಘರ್​​ ನಲ್ಲಿ ಬಿಜೆಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಠಿಣ ಪರಿಶ್ರಮದಿಂದ 100 ವರ್ಷಗಳ ಸ್ವಾತಂತ್ರ್ಯವನ್ನು ಸಮೀಪಿಸುತ್ತಿರುವಾಗ ನಾವು ಭಾರತವನ್ನು ಹೊಸ ಹಂತಕ್ಕೆ ಕೊಂಡೊಯ್ಯಬೇಕಾಗಿದೆ. ಶಾರ್ಟ್ ಕಟ್ ರಾಜಕೀಯವು ದೇಶವನ್ನು ನಾಶ ಮಾಡುತ್ತದೆ ಎಂದು ಹೇಳಿದರು

ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸದೆ ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಂಡು ಜನಪರ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜನರಿಂದ ಮತಗಳನ್ನು ಪಡೆಯುವುದು ತುಂಬಾ ಸುಲಭ, ಭಾರತವು ನಂಬಿಕೆ ಮತ್ತು ಆಧ್ಯಾತ್ಮದ ಭೂಮಿಯಾಗಿದೆ. ತೀರ್ಥಯಾತ್ರೆಗಳು ನಮ್ಮನ್ನು ಉತ್ತಮ ಸಮಾಜ ಮತ್ತು ದೇಶವಾಗಿ ರೂಪಿಸುತ್ತವೆ ಎಂದು ಮೋದಿ ಹೇಳಿದ್ದಾರೆ.

Join Whatsapp
Exit mobile version