Home ಟಾಪ್ ಸುದ್ದಿಗಳು ಬೆಳಗಾವಿಯಲ್ಲಿ ಸ್ಯಾಂಡಲ್ ವುಡ್ ನಟನ ಮೇಲೆ ಗನ್ ಶಾಟ್!

ಬೆಳಗಾವಿಯಲ್ಲಿ ಸ್ಯಾಂಡಲ್ ವುಡ್ ನಟನ ಮೇಲೆ ಗನ್ ಶಾಟ್!

ಬೆಳಗಾವಿ: ಸ್ಯಾಂಡಲ್ ವುಡ್ ನಟ ಶಿವರಂಜನ್ ಬೋಳಣ್ಣ ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಆಘಾತಕಾರಿ ಸುದ್ದಿ ಇದೀಗ ವರದಿಯಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾರುತಿ ದೇವಸ್ಥಾನದ ಬಳಿ ಶಿವರಂಜನ್ ಬೋಳಣ್ಣವರ ಹಳೆಯ ಮನೆ ಬಳಿ 3-4 ಸುತ್ತು ಫೈರಿಂಗ್ ನಡೆದಿದೆ.

ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಅದೃಷ್ಟವಶಾತ್ ಶಿವರಂಜನ್ ಅವರಿಗೆ ಯಾವುದೇ ಗುಂಡು ತಗುಲಿಲ್ಲ ಎನ್ನಲಾಗಿದೆ.

ಆಸ್ತಿ ವಿಚಾರವಾಗಿ ಈ ಶೂಟೌಟ್ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Join Whatsapp
Exit mobile version