ನವದೆಹಲಿ: ಭಗವದ್ಗೀತೆಯಲ್ಲಿ ಕೂಡ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಉಪದೇಶ ನೀಡಿರುವುದಾಗಿ ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್ ನಲ್ಲಿ ಸಮಜಾಯಿಷಿ ನೀಡಿದ್ದಾರೆ.
ಶಿವರಾಜ್ ಪಾಟೀಲ್ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಜೈರಾಮ್ ರಮೇಶ್, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ “ಡಿಸ್ಕವರಿ ಆಫ್ ಇಂಡಿಯಾ”ದ ಆಯ್ದ ಭಾಗವನ್ನು ಹಂಚಿಕೊಂಡು, ಗೀತೆಯ ಸಾರ್ವಕಾಲಿಕ ಸಂದೇಶದ ಬಗ್ಗೆ ಉಲ್ಲೇಖಿಸಿರುವುದರ ಬಗ್ಗೆ ತಿಳಿಸಿದ್ದಾರೆ.
My senior colleague Shivraj Patil reportedly made some comments on Bhagavad Gita that’s unacceptable. Subsequently, he clarified. @INCIndia’s stand is clear. Bhagavad Gita is a key foundational pillar of Indian civilisation. Here’s an excerpt from Nehru’s Discovery of India(p110) pic.twitter.com/rarJub7xTy
— Jairam Ramesh (@Jairam_Ramesh) October 21, 2022
ಜಿಹಾದ್ ಉಲ್ಲೇಖ ಇರುವುದು ಖುರಾನ್ ನಲ್ಲಿ ಮಾತ್ರ ಅಲ್ಲ; ಮಹಾಭಾರತದಲ್ಲಿ, ಭಗವದ್ಗೀತೆಯಲ್ಲಿ ಜಿಹಾದ್ ಉಲ್ಲೇಖವಿದ್ದು, ಕೃಷ್ಣ ಅರ್ಜುನನಿಗೆ ಜಿಹಾದ್ ಬೋಧನೆ ಮಾಡಿದ್ದಾನೆ ಎಂದು ಶಿವರಾಜ್ ಪಾಟೀಲ್ ಹೇಳಿಕೆ ನೀಡಿದ್ದರು.