ಗಾಂಧಿನಗರ: ಪ್ರಧಾನಿ ಮೋದಿ ತವರೂರು ಗುಜರಾತ್ ನಲ್ಲಿ ದೀಪಾವಳಿ ಪ್ರಯುಕ್ತ ಒಂದು ವಾರ ಸಂಚಾರ ನಿಯಮ ಉಲ್ಲಂಘಿಸಿದರೂ ಸಾರ್ವಜನಿಕರಿಗೆ ದಂಡ ಹಾಕದಂತೆ ಗುಜರಾತ್ ಮುಖ್ಯಮಂತ್ರಿ ಭೊಪೇಂದ್ರ ಪಟೇಲ್ ಸೂಚಿಸಿದ್ದಾರೆ.
ಅ.21 ರಿಂದ 27 ರವರೆಗೆ 7 ದಿನಗಳ ಕಾಲ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೂ ಪೊಲೀಸರು ದಂಡ ಹಾಕಬೇಡಿ ಎಂದು ಸರ್ಕಾರ ಸೂಚಿಸಿದೆ.
ಈ ಬಗ್ಗೆ ಮಾತನಾಡಿರುವ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ, ಪೊಲೀಸರು 7 ದಿನ ದಂಡ ವಿಧಿಸಲ್ಲ ಎಂದು ಸಾರ್ವಜನಿಕರು ಸಂಚಾರ ನಿಯಮವನ್ನು ಉಲ್ಲಂಘಿಸಬೇಡಿ. ಪೊಲೀಸರು ದಂಡ ವಿಧಿಸಲ್ಲ ಎಂದರೇ ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಅನುಸರಿಸಬಾರದೆಂದಲ್ಲ. ನೀವು ತಪ್ಪು ಮಾಡಿದರೂ 7 ದಿನ ದಂಡ ಪಾವತಿಸದೆ ತೆರಳಲು ಪೊಲೀಸರು ಅವಕಾಶ ಕೊಡುತ್ತಾರೆ ಅಷ್ಟೇ ಎಂದಿದ್ದಾರೆ.
ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇದೆಲ್ಲ ಚುನಾವಣೆಯ ಗಿಮಿಕ್ ಎಂಬ ಮಾತು ಕೇಳಿ ಬಂದಿದೆ.