Home ಟಾಪ್ ಸುದ್ದಿಗಳು ಹಝ್ರತ್ ಅಲಿಯವರ ಹೇಳಿಕೆಯನ್ನು ಉಲ್ಲೇಖಿಸಿ ಬಂಡಾಯ ಶಾಸಕರನ್ನು ಮತ್ತೆ ಕುಟುಕಿದ ಶಿವಸೇನೆ ನಾಯಕ ಸಂಜಯ್ ರಾವತ್

ಹಝ್ರತ್ ಅಲಿಯವರ ಹೇಳಿಕೆಯನ್ನು ಉಲ್ಲೇಖಿಸಿ ಬಂಡಾಯ ಶಾಸಕರನ್ನು ಮತ್ತೆ ಕುಟುಕಿದ ಶಿವಸೇನೆ ನಾಯಕ ಸಂಜಯ್ ರಾವತ್

ಮುಂಬೈ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ತೀವ್ರ ಕುತೂಹಲ ಮೂಡುತ್ತಿರುವ ಬೆನ್ನಲ್ಲೇ ಶಿವಸೇನೆ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಗುವಾಹಟಿಯಲ್ಲಿರುವ ಶಿವಸೇನೆ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಸ್ಲಾಮಿನ ನಾಲ್ಕನೇ ಖಲೀಫಾ ಹಝ್ರತ್ ಅಲಿಯವರ ಹೇಳಿಕೆಯನ್ನು ಉಲ್ಲೇಖಿಸಿ ರೆಬೆಲ್ ಶಾಸಕರನ್ನು ನಡೆದಾಡುವ ಶವಗಳು ಎಂದಿದ್ದಾರೆ.

ರೆಬೆಲ್ ಶಾಸಕರ ವಿರುದ್ಧ ‘ಜಹಲತ್’ ಒಂದು ರೀತಿಯ ಸಾವು ಮತ್ತು ‘ಜಾಹಿಲ್’ ಜನರು ನಡೆದಾಡುತ್ತಿರುವ ಶವಗಳು ಎಂದು ಹಝ್ರತ್ ಅಲಿಯವರ ಹೇಳಿಕೆಯನ್ನು ಉಲ್ಲೇಖಿಸಿ ಸಂಜಯ್ ರಾವತ್ ಟ್ವೀಟ್ ಮಾಡಿ ಕುಟುಕಿದ್ದಾರೆ. ಏತನ್ಮಧ್ಯೆ ಸಂಜಯ್ ಟ್ವೀಟ್ ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ರಾವತ್ ಸ್ಪಷ್ಟನೆಯನ್ನೂ ನೀಡಿದ್ದಾರೆ.

ನಾನು ಮಾತನಾಡಿರುವ ಸಾಲುಗಳು ಸಾಮಾನ್ಯವಾದದ್ದು, ಇದರಲ್ಲಿ ಯಾರ ಭಾವನೆಗಳನ್ನು ನೋಯಿಸುವ ಉದ್ದೇಶಗಳಿಲ್ಲ, 40 ವರ್ಷಗಳ ಕಾಲ ಪಕ್ಷದಲ್ಲಿದ್ದು ನಂತರ ಓಡಿಹೋದವರ ಆತ್ಮಗಳು ಸತ್ತಿವೆ ಎಂದು ಹೇಳಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ರಾವತ್ ಮರು ಪ್ರಶ್ನಿಸಿದ್ದಾರೆ.

Join Whatsapp
Exit mobile version