ಸಂವಿಧಾನ ರಕ್ಷಣೆ ಎಲ್ಲರ ಜವಾಬ್ದಾರಿ: ಶೇಖರ್ ಹಾವಂಜೆ

Prasthutha|

ಉಡುಪಿ: ಸಂವಿಧಾನ ದಿನಾಚರಣೆಯನ್ನು ದಲಿತ ಸಂಘರ್ಷ ಸಮಿತಿ ಭೀಮಾವಾದ ಉಡುಪಿ ಜಿಲ್ಲೆ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಪಕ್ಷದ ವತಿಯಿಂದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಚರಿಸಲಾಯಿತು.

- Advertisement -

ಸಂಘಟನೆಯ ಹಾಗೂ ಪಕ್ಷದ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಬದಲಾವಣೆ ಮಾಡಲು ಈಗಾಗಲೇ ಮನುವಾದಿಗಳ ಪಿತೂರಿ ನಡೆಯುತ್ತಿದೆ. ಅದಕ್ಕೆ ಅವಕಾಶ ಕೊಡಬಾರದು. ನಮ್ಮ ದೇಶದ ಸಂವಿಧಾನ ರಕ್ಷಣೆಯ ಜವಾಬ್ದಾರಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲನೆ ಮಾಡುವ ಜವಾಬ್ದಾರಿ ನಮ್ಮ ದೇಶದ ಬಹುಜನರ ಮೇಲಿದೆ ಎಂದು ತಿಳಿಸಿದರು.

 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಮೇಶ್ ಹರಿಖಂಡಿಗೆ, ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ಪ್ರಥ್ವಿ ಒಳಗುಡ್ಡೆ, ಸುಜಾತ ಹಾವಂಜೆ, ಶಿವಪುರ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಕುಮಾರ್, ಜಗನ್ನಾಥ್ ಕುಲಾಲ್, ವನಿತಾ ನಾರಾಯಣ ಅವರು ತಮ್ಮ ಭಾಷಣದಲ್ಲಿ, ಭಾರತದ ಸಂವಿಧಾನದ ಬಗ್ಗೆ, ಬಾಬಾಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದರು.

- Advertisement -

 ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಆರ್ ಪಿಐಕೆ ಪಕ್ಷದ ಜಿಲ್ಲಾಧ್ಯಕ್ಷ ಗೋಪಾಲ್ ಇಸರ್ಮಾರ್ ವಹಿಸಿದ್ದರು.  ಜಿಲ್ಲಾ ಸಂಚಾಲಕ ಭರತ್ ಹಾವಂಜೆ, ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣ ಮಾವಿನ ಕಟ್ಟೆ, ಸುಂದರಿ ಒಳಗುಡ್ಡೆ, ಮಂಜು ಬೈರಂಪಳ್ಳಿ ಸುನಿತಾ ಒಳಗುಡ್ಡೆ, ವಸಂತಿ, ಕುಸುಮಾ, ಸಂದೇಶ, ದೀಕ್ಷಾ ಕುಮಾರಿ, ಕೃಷ್ಣ ಅಜೆಕಾರು,ರತನ್ ರಾಜ್ ಹಾಗೂ ಸಂಘಟನೆಯ ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಶರತ್ ಎಸ್ ಹಾವಂಜೆ ಸ್ವಾಗತಿಸಿ, ಧನ್ಯವಾದ ಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಸತೀಶ್ ಒಳಗುಡ್ಡೆ ನಿರ್ವಾಹಿಸಿದರು.

ಕುಂದಾಪುರ ತಾಲೂಕಿನ ಗುಲ್ವಾಡಿ ಬೊಳ್ಕಟೆಯಲ್ಲೂ ಸಂವಿಧಾನ ಅರ್ಪಣಾ ದಿನಾಚರಣೆ ಕಾರ್ಯಕ್ರಮ ರಘು ಗುಲ್ವಾಡಿ ಅವರ ಅಧ್ಯಕ್ಷತೆಯಲ್ಲಿ ಕಾರ್ಮಿನ್ ಲೂವಿಸ್ ಹಾಗೂ ಇನ್ನಿತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.

Join Whatsapp
Exit mobile version