Home ಗಲ್ಫ್ ಹೆಚ್ ಐ ಎಫ್ ಕತಾರ್ ವಿಭಾಗದ ನೂತನ ಅಧ್ಯಕ್ಷರಾಗಿ ಶಫಕತ್ ಹುಸೈನ್ ಆಯ್ಕೆ

ಹೆಚ್ ಐ ಎಫ್ ಕತಾರ್ ವಿಭಾಗದ ನೂತನ ಅಧ್ಯಕ್ಷರಾಗಿ ಶಫಕತ್ ಹುಸೈನ್ ಆಯ್ಕೆ

ದೋಹ ಕತಾರ್ :  ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಹೆಚ್ ಐ ಎಫ್) ಇದರ ಕತಾರ್ ಘಟಕದ ವಾರ್ಷಿಕ ಮಹಾಸಭೆ ಇತ್ತಿಚೆಗೆ ನಡೆಯಿತು. ಸಭೆಯಲ್ಲಿ ಶಫಕತ್ ಹುಸೈನ್ ಸಂಘಟನೆಯ ಕತಾರ್ ವಿಭಾಗದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಶಹೀಮ್ ಮೊಹಮ್ಮದ್ ಸಂಸ್ಥೆಯ ನೂತನ ಕಾರ್ಯದರ್ಶಿಯಾಗಿ,  ಶುಹೇಬ್ ಅಹಮದ್ ಖಜಾಂಜಿಯಾಗಿ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ. ಕಳೆದ ಎರಡು ವರ್ಷದ ಸಂಘದ ಕಾರ್ಯಚಟುವಟಿಕೆಗಳನ್ನು ಸಂಸ್ಥೆಯ ಕಾರ್ಯದರ್ಶಿ ಶಹೀಮ್ ಮೊಹಮ್ಮದ್ ಪವರ್ ಪಾಯಿಂಟ್ ಮೂಲಕ ವಿವರಿಸಿದರು.


ಕತಾರ್ ಸಂಘ ಸಂಸ್ಥೆಗಳ ನಾಯಕರು, ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶುಹೇಬ್ ಅಹ್ಮದ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು

Join Whatsapp
Exit mobile version