Home ಟಾಪ್ ಸುದ್ದಿಗಳು ಕಾಂಗ್ರೆಸ್ ನಲ್ಲಿ ನಾಯಕರೆಂದು ಕರೆಸಿಕೊಳ್ಳುವವರು ಯಾರೂ ಇಲ್ಲ: ಮೋದಿ

ಕಾಂಗ್ರೆಸ್ ನಲ್ಲಿ ನಾಯಕರೆಂದು ಕರೆಸಿಕೊಳ್ಳುವವರು ಯಾರೂ ಇಲ್ಲ: ಮೋದಿ

ಡೆಹ್ರಾಡೂನ್: ಪ್ರಸ್ತುತ ಕಾಂಗ್ರೆಸ್ ನಲ್ಲಿ ಒಬ್ಬನೇ ಒಬ್ಬ ನಾಯಕನಿಲ್ಲ, ಇರುವುದು ಕೇವಲ ಸಹೋದರ ಸಹೋದರಿಯರಿಬ್ಬರು ಮಾತ್ರ ಎಂದು ಉತ್ತರಾಖಂಡ ವಿಧಾನಸಭಾ ಚುನಾವಣೆಯ ಅಂಗವಾಗಿ ಅಲ್ಮೋಡಾದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡಿದರು.


ಕಾಂಗ್ರೆಸ್ ನಲ್ಲಿ ಅನೇಕ ಮುಖ್ಯಮಂತ್ರಿಗಳು ಮತ್ತು ನಾಯಕರು ಗಳಿದ್ದರು. ಅವರು ಈಗ ಎಲ್ಲಿದ್ದಾರೆ? ಚುನಾವಣಾ ವ್ಯಾಪ್ತಿಯ ರಾಜ್ಯಗಳಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಏಕೆ ಪ್ರಚಾರ ಮಾಡುತ್ತಿಲ್ಲ?
ಜನರನ್ನು ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಒಡೆದು ಆಳುವುದು, ಇಡೀ ದೇಶವನ್ನು ಲೂಟಿ ಮಾಡುವುದು ಮಾತ್ರ ಕಾಂಗ್ರೆಸ್ ನ ಧ್ಯೇಯ. ಉತ್ತರಾಖಂಡದಲ್ಲಿ ಕುಮಾಯೂನ್-ಗದ್ವಾಲ್ ಪ್ರದೇಶಗಳನ್ನು ವಿಭಜಿಸುವ ಮೂಲಕ ಇಡೀ ದೇಶವನ್ನು ಲೂಟಿ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಮೋದಿ ಟೀಕಿಸಿದರು.

ಮುಸ್ಲಿಂ ವಿಶ್ವವಿದ್ಯಾಲಯದ ವಿವಾದವನ್ನು ಎತ್ತಿ ಹಿಡಿದು ‘ವಿಶ್ವವಿದ್ಯಾಲಯದ ಹೆಸರಿನಲ್ಲಿ ವಿಭಜನೆಯನ್ನು ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ’ ಎಂದು ಮೋದಿ ಹೇಳಿದರು.


ಉತ್ತರಾಖಂಡದ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ. ಪ್ರಸ್ತುತ ಉತ್ತರಾಖಂಡ ರಾಜ್ಯವನ್ನು ಆಳುತ್ತಿರುವ ಬಿಜೆಪಿ ಯಾವುದೇ ಬೆಲೆ ತೆತ್ತಾದರೂ ಮರಳಿ ಪಡೆಯಲು ಪ್ರಯತ್ನಿಸುತ್ತಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Join Whatsapp
Exit mobile version