Home ಟಾಪ್ ಸುದ್ದಿಗಳು ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ಬ್ರಿಜ್ ಭೂಷಣ್ ಸಿಂಗ್ ಗೆ ಜಾಮೀನು

ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ಬ್ರಿಜ್ ಭೂಷಣ್ ಸಿಂಗ್ ಗೆ ಜಾಮೀನು

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಚೂರು ಮಾಡಿದೆ.


ಬಿಜೆಪಿ ಸಂಸದರೂ ಆಗಿರುವ ಸಿಂಗ್ ಅವರಿಗೆ ಎರಡು ದಿನ ಜಾಮೀನು ನೀಡಿರುವ, ದೆಹಲಿ ಕೋರ್ಟ್ ನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಚ್.ಎಸ್. ಜಸ್ಪಾಲ್ ಅವರು ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದ್ದಾರೆ.


ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷ್ಯಾಧಾರಗಳು ಇವೆ ಎಂದು ಜುಲೈ 7ರಂದು ಹೇಳಿದ್ದ ನ್ಯಾಯಾಲಯ, ಜುಲೈ 18ರಂದು (ಇಂದು) ಹಾಜರಾಗುವಂತೆ ಶುಕ್ರವಾರ ಸಮನ್ಸ್ ನೀಡಿತ್ತು.


ಸಿಂಗ್ ಅವರು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ.

Join Whatsapp
Exit mobile version