Home ಟಾಪ್ ಸುದ್ದಿಗಳು ತಂದೆ-ತಾಯಿಯನ್ನು ಕೊಂದು ಮಗ ಎಸ್ಕೇಪ್!

ತಂದೆ-ತಾಯಿಯನ್ನು ಕೊಂದು ಮಗ ಎಸ್ಕೇಪ್!

ಬೆಂಗಳೂರು: ಅಪ್ಪ-ಅಮ್ಮನನ್ನು ಮಗನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಟರಾಯನಪುರದಲ್ಲಿ ನಡೆದಿದೆ.


ತಾಯಿ ಶಾಂತ (60), ತಂದೆ ಭಾಸ್ಕರ್ (63) ಕೊಲೆಯಾದವರು. ಇವರನ್ನು ಮಗ ಶರತ್ (26) ಕೊಲೆ ಮಾಡಿದ್ದಾನೆ. ಕೊಲೆಯಾದ ದಂಪತಿ ಮಂಗಳೂರು ಮೂಲದವರು. 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ರು. ತಾಯಿ ಕೇಂದ್ರ ಸರ್ಕಾರದ ಸಿಬ್ಬಂದಿಯಾಗಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ತಂದೆ ಖಾಸಗಿ ಕ್ಯಾಂಟೀನ್ ವೊಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.


ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗ ಕೆಲಸಕ್ಕೆ ಹೋಗುತ್ತಿದ್ದಾನೆ. ಆರೋಪಿ ಶರತ್ ಮನೆಯಲ್ಲೇ ಇರುತ್ತಿದ್ದನು. ಆಗಾಗ ಸೈಕೋ ರೀತಿ ವರ್ತಿಸ್ತಿದ್ದ ಶರತ್, ಸೋಮವಾರ ಸಂಜೆ ವೇಳೆಗೆ ಕುಡಿದು ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಈ ವೇಳೆ ರಾಡ್ ನಿಂದ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಇತ್ತ ತಂದೆ-ತಾಯಿ ಮೃತಪಟ್ಟಿರುವುದನ್ನು ಗಮನಿಸಿದ ಆರೋಪಿ ಮನೆ ಲಾಕ್ ಮಾಡಿ ಎಸ್ಕೇಪ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version