Home ಗಲ್ಫ್ ಕೊರಿಂಗಿಲ ಜಮಹತ್ ಗಲ್ಫ್ ವಿಂಗ್ 2022-23 ರ ಸಾಲಿನ ಮಹಾಸಭೆ: ಗೌರವಾಧ್ಯಕ್ಷರಾಗಿ ಮುಹಮ್ಮದ್ ಹಾಜಿ ಕೊರಿಂಗಿಲ...

ಕೊರಿಂಗಿಲ ಜಮಹತ್ ಗಲ್ಫ್ ವಿಂಗ್ 2022-23 ರ ಸಾಲಿನ ಮಹಾಸಭೆ: ಗೌರವಾಧ್ಯಕ್ಷರಾಗಿ ಮುಹಮ್ಮದ್ ಹಾಜಿ ಕೊರಿಂಗಿಲ ಆಯ್ಕೆ

ಕೊರಿಂಗಿಲ ಜಮಹತ್ ಗಲ್ಫ್ ವಿಂಗ್ ಮಾಸಿಕ ಮಹಾ ಸಭೆಯು  ದಿನಾಂಕ 14.07.2023 ಶುಕ್ರವಾರ  ಆರಿಫ್ ಕೊರಿಂಗಿಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಝಕಾರಿಯಾ ಕೊರಿಂಗಿಲ ರವರು ಸ್ವಾಗತಿಸಿದರು ಹಮೀದ್ ಫೈಝೀ ಕತಾರ್ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿದರು. ಪ್ರಧಾನ ಕಾರ್ಯದರ್ಶಿ ಜಾಬಿರ್ ಡೆಮ್ಮ0ಗರ ರವರು ಕಳೆದ ವರ್ಷದ ವರದಿಯನ್ನು ವಾಚಿಸಿದರು.

ನಂತರ ಹೊಸ ಸಮಿತಿಯನ್ನು ರಚಿಸಲಾಯಿತು.

ಕೊರಿಂಗಿಲ ಜಮಾತ್ ಗಲ್ಫ್ ವಿಂಗ್ ಇದರ ನೂತನ ಸಾರಥಿಗಳು

ಗೌರವಾಧ್ಯಕ್ಷರು-ಮಹಮ್ಮದ್ ಹಾಜಿ ಕೊರಿಂಗಿಲ, ಮುಖ್ಯ ಸಲಹೆಗಾರರು- ಬಾತಿಶ ಕೊರಿಂಗಿಲ, ಶರೀಫ್ ಬಿಂತಡ್ಕ, ಅಧ್ಯಕ್ಷರು- ಆರಿಫ್ ಕೊರಿಂಗಿಲ, ಉಪಾಧ್ಯಕ್ಷರು-ಹಮೀದ್ ಫೈಝಿ ಕೀಲಂಪಾಡಿ, ಪ್ರಧಾನ ಕಾರ್ಯದರ್ಶಿ-ಜಾಬೀರ್ ಡೇಮ್ಮಂಗರ, ಜೊತೆ ಕಾರ್ಯದರ್ಶಿಗಳು- ಅಮ್ಮಿ ಕೊರಿಂಗಿಲ, ಅಝೀಜ್ ಕೀಲಂಪಾಡಿ, ಕೋಶಾಧಿಕಾರಿ-ಅಲಿ ಕುಕ್ಕುವಳ್ಳಿ, ಸಂಘಟನಾ ಕಾರ್ಯದರ್ಶಿ-ಮುಝಾಮಿಲ್ಲ್ ಕೊರಿಂಗಿಲ, ಝಕರಿಯ ಕೊರಿಂಗಿಲ, ಪತ್ರಿಕಾ ಪ್ರತಿನಿಧಿ -ಶಫೀಕ್ ಕೊರಿಂಗಿಲ, ಸೌದಿ ರಿಸೀವರ್ – ಉದೈಫ್ ಕೊರಿಂಗಿಲ, ದುಬೈ ರಿಸೀವರ್ -ಅಸ್ಕರ್ ಕೊರಿಂಗಿಲ, ಕತ್ತರ್ ರಿಸೀವರ್ – ಹಮೀದ್ ಗುಂಡ್ಯಡ್ಕ ಮತ್ತು 35 ಸದಸ್ಯರನ್ನು ಜಮಾತ್ ಗಲ್ಫ್ ವಿಂಗ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ  ಎಂದು ಸಮಿತಿಯ ಪತ್ರಿಕಾ ಪ್ರತಿನಿಧಿಯಾದ ಶಫೀಕ್ ಕೊರಿಂಗಿಲರವರು ತಿಳಿಸಿದ್ದಾರೆ.

ಆರೀಫ್ ಕೊರಿಂಗಿಲ- ಅಧ್ಯಕ್ಷರು

ಪ್ರಧಾನ ಕಾರ್ಯದರ್ಶಿ -ಜಾಬೀರ್ ಡೇಮ್ಮಂಗರ

ಕೋಶಾಧಿಕಾರಿ -ಅಲಿ ಕುಕ್ಕುವಳ್ಳಿ

Join Whatsapp
Exit mobile version