ಎಡಿಟರ್ಸ್ ಗಿಲ್ಡ್‌ಗೆ ಅಧ್ಯಕ್ಷರಾಗಿ ಪುನರಾಯ್ಕೆಯಾದ ಸೀಮಾ ಮುಸ್ತಾಫಾ

Prasthutha|

ನವದೆಹಲಿ: ಭಾರತೀಯ ಸಂಪಾದಕರ ಒಕ್ಕೂಟದ (ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ) ಅಧ್ಯಕ್ಷೆಯಾಗಿ ದಿ ಸಿಟಿಜನ್ ಸಂಪಾದಕಿ ಸೀಮಾ ಮುಸ್ತಾಫಾ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

- Advertisement -

‘ದಿ ಕಾರವಾನ್’ ಸಂಪಾದಕ ಅನಂತ್ ನಾಥ್ ಪ್ರಧಾನ ಕಾರ್ಯದರ್ಶಿ ಮತ್ತು ‘ಸಕಾಳ್’ ಮಾಧ್ಯಮ ಸಮೂಹದ ಮುಖ್ಯ ಸಂಪಾದಕ ಶ್ರೀರಾಮ್ ಪವಾರ್ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸದಸ್ಯರ ಚುನಾವಣಾ ಸಮಿತಿಯ ಪದಾಧಿಕಾರಿಗಳಾದ ಪತ್ರಕರ್ತರಾದ ರಾಜ್‌ದೀಪ್ ಸರ್ದೇಸಾಯಿ, ವಿಜಯ್ ನಾಯ್ಕ್ ಮತ್ತು ಕ್ಯು.ಡಬ್ಲ್ಯು. ನಖ್ವಿ ಅವರನ್ನೊಳಗೊಂಡ ಮೂವರು ಆಯ್ಕೆಯನ್ನು ಘೋಷಿಸಿದೆ.

- Advertisement -

2020-21ನೇ ಸಾಲಿನಲ್ಲಿ ‘ಹಾರ್ಡ್ ನ್ಯೂಸ್‌’ ಸಂಪಾದಕ ಸಂಜಯ್ ಕಪೂರ್ ಮತ್ತು ಅನಂತ್ ನಾಥ್ ಅವರು ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದ್ದರು.

Join Whatsapp
Exit mobile version